ಬೆಂಗಳೂರು: ಇಸ್ರೋದ ಬಾಹುಬಲಿ ಸಿಎಂಎಸ್-03 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. SDSC/ISRO ಶ್ರೀಹರಿಕೋಟಾದಿಂದ CMS-03 ಸಂವಹನ ಉಪಗ್ರಹವನ್ನು ಹೊತ್ತ ISROದ LVM3-M5 ಉಡಾವಣೆ ಮಾಡಲಾಯಿತು.
ಭಾರತೀಯ ನೌಕಾಪಡೆಯ GSAT 7R (CMS-03) ಸಂವಹನ ಉಪಗ್ರಹವು ಇಂದು ಭಾರತೀಯ ನೌಕಾಪಡೆಗೆ ಇದುವರೆಗಿನ ಅತ್ಯಂತ ಮುಂದುವರಿದ ಸಂವಹನ ಉಪಗ್ರಹವಾಗಿದೆ.
ಈ ಉಪಗ್ರಹವು ನೌಕಾಪಡೆಯ ಬಾಹ್ಯಾಕಾಶ ಆಧಾರಿತ ಸಂವಹನ ಮತ್ತು ಕಡಲ ಕ್ಷೇತ್ರದ ಜಾಗೃತಿ ಸಾಮರ್ಥ್ಯಗಳನ್ನು ಬಲಪಡಿಸುತ್ತದೆ.
ಈ ಉಪಗ್ರಹವು ಇಲ್ಲಿಯವರೆಗಿನ ಭಾರತದ ಅತ್ಯಂತ ಭಾರವಾದ ಸಂವಹನ ಉಪಗ್ರಹವಾಗಿದ್ದು, ಸುಮಾರು 4,400 ಕೆಜಿ ತೂಕವಿದ್ದು, ಭಾರತೀಯ ನೌಕಾಪಡೆಯ ಕಾರ್ಯಾಚರಣೆಯ ಅವಶ್ಯಕತೆಗಳನ್ನು ಪೂರೈಸಲು ವಿಶೇಷವಾಗಿ ಅಭಿವೃದ್ಧಿಪಡಿಸಲಾದ ಅನೇಕ ಸ್ಥಳೀಯ ಅತ್ಯಾಧುನಿಕ ಘಟಕಗಳನ್ನು ಒಳಗೊಂಡಿದೆ.
ಇಸ್ರೋದಿಂದ ಎಲ್ ವಿ ಎಂ 3 ರಾಕೆಟ್ ಮೂಲಕ ಬಾಹುಬಲಿ ಸಿಎಂಎಸ್ 03 ಉಪಗ್ರಹವನ್ನು ಉಡಾವಣೆ ಮಾಡಲಾಯಿತು. ಸುಮಾರು 4,410 ಕೆಜಿ ತೂಕದ ಸಂವಹನ ಉಪಗ್ರಹವನ್ನು ನಿಗದಿತ ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿದೆ.




