Ad imageAd image

ಯಶಸ್ವಿ ಯೋಗ ದಿನಾಚಾರಣೆ : ಗೋರಖನಾಥ ಕುಂಬಾರ ಸಂತಸ

Bharath Vaibhav
ಯಶಸ್ವಿ ಯೋಗ ದಿನಾಚಾರಣೆ : ಗೋರಖನಾಥ ಕುಂಬಾರ ಸಂತಸ
WhatsApp Group Join Now
Telegram Group Join Now

21 ಕಡೆ ಯೋಗ ದಿನಾಚರಣೆ | ಶ್ರೀ ಸಿದ್ದರಾಮೇಶ್ವರ ಆಯುರ್ವೇದಿಕ್ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಸಹಭಾಗಿತ್ವ

ಬೀದರ : ಯೋಗವೆಂದರೆ ಆಸನ–ಪ್ರಾಣಾಯಾಮಗಳಷ್ಟೇ ಅಲ್ಲ ಅಥವಾ ಎಂಟು ಅಂಗಗಳಿರುವ ಯೋಗಶಾಸ್ತ್ರವಷ್ಟೇ ಅಲ್ಲ ಅದು ಭಾರತವು ಸಾಕ್ಷಾತ್ಕರಿಸಿಕೊಂಡಿರುವ ಒಂದು ಜೀವನದೃಷ್ಟಿಯಾಗಿದೆ, ಭಗವದ್ಗೀತೆಯ ಸಾರದಂತೆ ನಾವು ಕೈಗೆತ್ತಿಕೊಂಡ ಕಾರ್ಯವನ್ನು ಅತ್ಯಂತ ಕುಶಲವಾಗಿ ನಿರ್ವಹಿಸುವುದು ಕೂಡ ಒಂದ ಯೋಗವಾಗಿದೆ ಎಂದು ಐ.ಎನ್.ಓ ಜಿಲ್ಲಾದ್ಯಕ್ಷ ಗೋರಖನಾಥ ಕುಂಬಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತ ಸರ್ಕಾರ ಆಯುಶ್ ಇಲಾಖೆಯ ಮೋರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯ ಸಹಯೋಗದಲ್ಲಿ ಇಂಟರ್ನ್ಯಾಶನಲ್ ನ್ಯಾಚುರೋಪತಿ ಆರ್ಗನೈಜೇಶನ್, ಸೂರ್ಯ ಫೌಂಡೇಶನ್ ಹಾಗೂ ಪತಂಜಲಿ ಸಂಸ್ಥೆಗಳ ಆಯೋಜಕತ್ವದಲ್ಲಿ ಮತ್ತು ಶ್ರೀ ಸಿದ್ದರಾಮೇಶ್ವರ ಆಯುರ್ವೇದಿಕ್ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಯೋಗ ತರಬೇತಿಯಲ್ಲಿ ಜಿಲ್ಲೆಯಾದ್ಯಂತ 21 ಕಡೆ ಯೋಗ ದಿನಾಚಾರಣೆಯ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿರುವುದು ಸಂತಸದ ವಿಷಯವಾಗಿದೆ.

ಐ.ಎನ್.ಓ ರಾಷ್ಟ್ರೀಯ ಅದ್ಯಕ್ಷ ಅನಂತ ಬಿರಾದಾರ ಅವರ ಮುಂದಾಳತ್ವದಲ್ಲಿ ದೇಶಾದ್ಯಂತ ಯೋಗ ದಿನಾಚರಣೆಯ ನಿಮಿತ್ತ ಹಲವಾರು ಜನಜಾಗೃತಿ ಕಾರ್ಯಕ್ರಮಗಳು ನಡೆದಿವೆ ಮತ್ತು ಬರುವ ದಿನಗಳಲ್ಲಿ ಬೀದರ ಜಿಲ್ಲೆಯಲ್ಲಿ ನ್ಯಾಚುರೋಪತಿ ಮತ್ತು ಯೋಗದ ಕುರಿತು ಇನ್ನೂ ಅನೇಕ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.

ಈ ಯೋಗ ದಿನಾಚರಣೆಯ ಅಭಿಯಾನದಲ್ಲಿ ಶ್ರೀ ಸಿದ್ದರಾಮೇಶ್ವರ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಚಾರ್ಯರಾದ ಡಾ.ರೂಪೇಶ ಎಕಲಾರಕರ್ ಮತ್ತು ವಿಧ್ಯಾರ್ಥಿಗಳ ವಿಶೇಷ ಕಾಳಜಿ ಹಾಗೂ ಪ್ರಮುಖರಾದ ಗುರುನಾಥ ರಾಜಗೀರಾ, ಯೋಗೆಂದ್ರ ಯದಲಾಪುರೆ, ಸಂತೋಷ ಪಾಟೀಲ, ಡಾ.ಮಂಜುಳಾ ಮುಚಳಂಬೆ, ಗುರುನಾಥ ಮೂಲಗೆ, ಅನೀಲ ಪಸಾರ್ಗಿ, ಈಶ್ವರ ರುಮ್ಮಾ, ಆನಂದ ರೆಡ್ಡಿ,ವಿನೋದ ಪಾಟೀಲ ಅವರು ಕೂಡ ವಿವಿದೆಡೆ ಯೋಗ ತರಬೇತಿ ಮತ್ತು ಸ್ಥಳಿಯ ಸಂಘ ಸಂಸ್ಥೆಗಳು ಮತ್ತು ಶಾಲಾ ಕಾಲೇಜುಗಳ ಸಹಕಾರಕ್ಕೆ ಗೋರಖನಾಥ ಕುಂಬಾರ ಅವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ವರದಿ : ಸಂತೋಷ ಬಿಜಿ ಪಾಟೀಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!