ಬೆಂಗಳೂರು : ಭಾರತದ ದೇಶದ ಮೇಲೆ ಭಯೋತ್ಪಾದನೆಯ ದಾಳಿ ನಡೆದ ಸಂದರ್ಭದಲ್ಲಿ ಭಾರತ ಪಾಕ್ ನಡುವೆ ಯುದ್ಧದ ಕಾರ್ಮೋಡ ದಟ್ಟವಾಗಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕರ ಹೇಳಿಕೆಗಳು ಖಂಡನೀಯ. ಅವು ನೋಡಿದಾಗ ಇವರು ಈ ದೇಶವನ್ನು 55 ವರ್ಷ ಆಳಿದ್ದಾರೂ ಇಲ್ಲವೂ ಎಂಬ ಸಂಶಯ ಮೂಡುತ್ತದೆ.
ಕಾಂಗ್ರೆಸ್ ವಕ್ಷದ ರಾಷ್ಟ್ರ ಪ್ರೇಮ ಅಧಪತನವಾಗಿರುವುದು ಸ್ಪಷ್ಟ ವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ದೂರಿದರು.
ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಚೀನಾ ಯುದ್ಧದಲ್ಲಿ ದೇಶಕ್ಕೆ ಸೋಲುಂಟಾಗಿದೆ. ದೇಶದ ವಿವಿಧ ಕಡೆಗಳಲ್ಲಿ ಅಂದರೆ ಮುಂಬೈ, ದೆಹಲಿ, ಬೆಂಗಳೂರು, ಹೈದರಾಬಾದ್ ಸೇರಿದಂತೆ ಹಲವಾರು ಕಡೆ ಭಯೋತ್ಪಾದಕ ದಾಳಿಗಳು ನಡೆದವು. ಈ ವೇಳೆ ಅಂತಹ ಚಟುವಟಿಕೆಗಳ ವಿರುದ್ಧ ಕ್ರಮ ತೆಗೆದುಕೊಳ್ಳದಿರುವುದು, ಮುಂಬೈ ಮೇಲೆ 2008 ರಲ್ಲಿ ನಡೆದ 26/11 ದಾಳಿಯಲ್ಲಿ 130 ಅಮಾಯಕರ ಸಾವುಂಟಾದಾಗ ಘಟನೆ ಪೂರ್ವದಲ್ಲಿ ಇಂಟಲಿಜೆನ್ಸ್ ವೈಫಲ್ಯ ಆಗಿದೆ ಎಂದು ಅವರು ಕಾಂಗ್ರೆಸ್ ಅವಧಿಯಲ್ಲಾದ
ಮಹತ್ವ ಘಟನೆ, ದಾಳಿ ನೆನಪಿಸಿದರು.




