Ad imageAd image

ವಿಜಯಲಕ್ಷ್ಮೀರವರು ನನಗೆ ಹೇಳಿದ್ರೆ ಉತ್ತರ ಕೊಡ್ತೇನೆ : ಸ್ಟಾರ್ ವಾರ್ ಬಗ್ಗೆ ಸುದೀಪ್ ಫಸ್ಟ್ ರಿಯಾಕ್ಷನ್

Bharath Vaibhav
ವಿಜಯಲಕ್ಷ್ಮೀರವರು ನನಗೆ ಹೇಳಿದ್ರೆ ಉತ್ತರ ಕೊಡ್ತೇನೆ : ಸ್ಟಾರ್ ವಾರ್ ಬಗ್ಗೆ ಸುದೀಪ್ ಫಸ್ಟ್ ರಿಯಾಕ್ಷನ್
WhatsApp Group Join Now
Telegram Group Join Now

ಬೆಂಗಳೂರು : ಸ್ಟಾರ್ ವಾರ್ ಬಗ್ಗೆ ಕಿಚ್ಚ ಸುದೀಪ್ ಅವರು ಫಸ್ಟ್ ರಿಯಾಕ್ಷನ್ ನೀಡಿದ್ದು, ವಿಜಯಲಕ್ಷ್ಮೀ ಅವರು ನನಗೆ ಹೇಳಿದ್ರೆ ಉತ್ತರ ಕೊಡ್ತೇನೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಸುದೀಪ್, ವಿಜಯಲಕ್ಷ್ಮೀ ನನಗೆ ಹೇಳಿದ್ರೆ ಉತ್ತರ ಕೊಡ್ತೇನೆ. ನನಗೆ ಹೇಳಿದ್ರೆ ಖಂಡಿತವಾಗಿಯೂ ಉತ್ತರ ಕೊಡುತ್ತೇನೆ.

ಅವರಿಗೆ ಏನು ನೋವಿದೆ ನನಗೆ ಗೊತ್ತಿಲ್ಲ. ಸುದೀಪ್ ಫ್ಯಾನ್ಸ್ ವಾರ್ ಶುರು ಮಾಡಿದ್ರೆ ಪ್ರಶ್ನಿಸಬೇಕಿತ್ತು. ರಿಯಾಕ್ಷನ್ ಆ ಕಡೆ ಬಂದಿದ್ದರಿಂದ ಇಷ್ಟು ಜಾಸ್ತಿಯಾಗಿದೆ.

ನನ್ನ ಸಿನಿಮಾ ಕಾಪಾಡಿಕೊಳ್ಳಬೇಕಿದೆ. ಜಿದ್ದಾಜಿದ್ದಿ ಮಾಡ್ತಿಲ್ಲ. ಪೈರಸಿ ಮಾಡೋರನ್ನು ಕರುಣೆ ಇಲ್ಲದೆ ಒಳಗೆ ಹಾಕಿಸುತ್ತೇನೆ. ಯಾರಿಗೋ ವಾರ್ನ್ ಮಾಡೋಹಾಗಿದ್ರೆ ಕದ್ದುಮುಚ್ಚಿ ಹೆಳಲ್ಲ.

ಚೆಸ್ ಆಡುವಾಗ ಕದ್ದು ಮುಚ್ಚಿ ಚೆಕ್ ಅಂತ ಹೇಳುವುದಿಲ್ಲ. ಹೇಳಿಯೇ ಹೊಡಿಬೇಕು. ಇಲ್ಲೂ ಚೆಕ್ ಅಂತ ಹೇಳಿದ್ದೇನೆ. ಭಾಷಣದಲ್‌ಇ ಪೈರಸಿ ಅಂತ ಪದ ಹೇಳುವ ಅಗತ್ಯವಿಲ್ಲ. ಪೈರಸಿ ಬಗ್ಗೆ ವಾರ್ನ್ ಮಾಡಿದ್ದು ತಪ್ಪಾ, ಹುಬ್ಬಳ್ಳಿಯಲ್ಲಿ ಮಾತನಾಡಿದ್ದು ಇಂದು ಏಕೆ ವೈರಲ್ ಆಗಿದೆ.

ಬಹಳ ನಟರು ಇದ್ದಾರೆ. ನಾನೇ ಯಾಕೆ? ವೇದಿಕೆ ಹತ್ತಿ ಮಾತನಾಡ್ತಾರೆ, ಸಂದರ್ಶನ ಕೊಡ್ತಾರೆ ಅಂತಾರೆ. ವಿಜಯಲಕ್ಷ್ಮೀ ಅವರು ಯಾರಿಗೆ ಹೇಳಿದ್ದು ಅಂತ ಗೊತ್ತಿಲ್ವಲ್ಲ. ಅವರ ನೋವು ಯಾರಿಗೆ ಗೊತ್ತು, ಹೆಣ್ಣುಮಗು ಬಗ್ಗೆ ಮಾತನಾಡಲ್ಲ ಎಂದರು.

ಶನಿವಾರದಂದು ಹುಬ್ಬಳ್ಳಿಯಲ್ಲಿ ಮಾರ್ಕ್ ಚಿತ್ರದ ಪ್ರೀ-ರಿಲೀಸ್ ಇವೆಂಟ್ ನಲ್ಲಿ ಮಾತನಾಡಿರುವಂತ ಅವರು, ನಮ್ಮ ಅಭಿಮಾನಿಗಳು ನೀವು ಸುಮ್ಮನೇ ಇರಬೇಡಿ. ಈ ಕಾರ್ಯಕ್ರಮ ಯಾಕೆ ಹುಬ್ಬಳ್ಳಿಯಲ್ಲಿ ಮಾಡುತ್ತಿದ್ದೀವಿ ಅಂದ್ರೆ ಇಲ್ಲಿಂದ ಮಾತನಾಡಿದ್ರೆ ಕೆಲವೊಬ್ಬರಿಗೆ ತಟ್ಟುತ್ತೆ ಎಂದರು.

ಈ ನಡುವೆ ಈ ನಡುವೆ ಸ್ಯಾಂಡಲ್ ವುಡ್ ನಲ್ಲಿ ಇದೀಗ ಮತ್ತೆ ಸ್ಟಾರ್ ವಾರ್ ಆರಂಭವಾಗಿದ್ದು ಕಿಚ್ಚನ ಯುದ್ಧದ ಮಾತಿಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಇದೀಗ ಎಂಟ್ರಿ ಕೊಟ್ಟಿದ್ದು. ದರ್ಶನ್ ಜೈಲಲ್ಲಿ ಇದ್ದಾಗ ಇವರು ವೇದಿಕೆ ಮೇಲೆ ಫ್ಯಾನ್ಸ್ ಬಗ್ಗೆ ಮಾತನಾಡುತ್ತಾರೆ.

ಆದರೆ ದರ್ಶನ್ ಅವರು ಹೊರಗಡೆ ಇದ್ದಾಗ ಈ ರೀತಿ ಹೇಳಿಕೆ ನೀಡುವವರು ಬೆಂಗಳೂರಿನಲ್ಲಿ ಇದ್ದಾರೋ ಇಲ್ವೋ ಅಂತ ಇರುತ್ತಾರೆ ಎಂದು ಕಿಚ್ಚ ಸುದೀಪ್ ಗೆ ಟಾಂಗ್ ನೀಡಿದ್ದಾರೆ.ದರ್ಶನ್ ಜೈಲಿನಲ್ಲಿ ಇದ್ದಾಗ ಕೆಲವರು ಹೇಳಿಕೆ ಕೊಡುತ್ತಾರೆ.

ಫ್ಯಾನ್ಸ್ ಬಗ್ಗೆ ವೇದಿಕೆಯ ಮೇಲೆ ಮಾತನಾಡುತ್ತಾರೆ ಆದರೆ ದರ್ಶನ್ ಇದ್ದಾಗ ಮಾತ್ರ ಅವರೆಲ್ಲ ಬೆಂಗಳೂರಿನಲ್ಲಿ ಇದ್ದಾರ ಇಲ್ವಾ ಅಂತ ಗೊತ್ತಾಗದಂತೆ ಇರುತ್ತಾರೆ. ಕಿಚ್ಚ ಸುದೀಪ್ ಗೆ ದರ್ಶನ್ ಪತ್ನಿ ಇದೀಗ ಟಾಂಗ್‌ ನೀಡಿದ್ದಾರೆ.

ದಾವಣಗೆರೆಯಲ್ಲಿ ಪತ್ನಿ ವಿಜಯ್ ಲಕ್ಷ್ಮಿ ಈ ವಿಚಾರವಾಗಿ ಮಾತನಾಡಿದರು ದರ್ಶನ್ ಬಗ್ಗೆ ಹೇಳುವವರ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ ದರ್ಶನ್ ಅಭಿಮಾನಿಗಳು ತಲೆ ಕೆಡಿಸಿಕೊಳ್ಳಬೇಡಿ ಎಂದು ಟಾಂಗ್ ನೀಡಿದ್ದಾರೆ.

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!