Ad imageAd image

ನಗರಸಭೆ ಕಾಂಗ್ರೆಸ್ ತೆಕ್ಕೆಗೆ ,ಅದ್ಯಕ್ಷರಾಗಿ ಸುಧಾರಣಿ ಸಂಗಮ್ ಹಾಗೂ ಉಪಾದ್ಯಕ್ಷರಾಗಿ ಕಾಳಮ್ಮ ಜಕ್ಕಾ ಆಯ್ಕೆ

Bharath Vaibhav
ನಗರಸಭೆ ಕಾಂಗ್ರೆಸ್ ತೆಕ್ಕೆಗೆ ,ಅದ್ಯಕ್ಷರಾಗಿ ಸುಧಾರಣಿ ಸಂಗಮ್ ಹಾಗೂ ಉಪಾದ್ಯಕ್ಷರಾಗಿ ಕಾಳಮ್ಮ ಜಕ್ಕಾ ಆಯ್ಕೆ
WhatsApp Group Join Now
Telegram Group Join Now

ಇಳಕಲ್ :– ತೀವ್ರ ಕುತೂಹಲ ಭರಿತಕ್ಕೆ ಕಾರಣವಾಗಿದ್ದ ಇಲಕಲ್ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗೆ ಮಂಗಳವಾರದಂದು ನಡೆಯಿತು.ಕಾಂಗ್ರೇಸಿನಲ್ಲಿ ಕೇವಲ 8 ನಗರಸಭೆ ಸದಸ್ಯರಿದ್ದರೂ ಬಿಜೆಪಿ ಜೆಡಿಸ್‌ ಪಕ್ಷೇತರ ಅಭ್ಯರ್ಥಿಗಳು ಒಟ್ಟು 9 ಜನ ಕಾಂಗ್ರೆಸ್ ಗೆ ಬೆಂಬಲ ನೀಡಿದ್ದಲ್ಲದೇ, ಶಾಸಕ ವಿಜಯಾನಂದ ಕಾಶಪ್ಪನವರ ಒಂದು ಮತ ಸೇರಿ ಒಟ್ಟು 18 ಮತಗಳನ್ನು ಪಡೆದ ಸುಧಾರಾಣಿ ಸಂಗಮ ಅಧ್ಯಕ್ಷ ಸ್ಥಾನ ಪಡೆದರೆ.

ಬಿಜೆಪಿಯಿಂದ ಗೆದ್ದಿದ್ದ ಕಾಳಮ್ಮ ಜಕ್ಕಾ ಕಾಂಗ್ರೇಸಿಗೆ ಬೆಂಬಲ ನೀಡಿ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು.ಇತ್ತ ಸಂಸದ ಪಿ ಸಿ ಗದ್ದಿಗೌಡ್ರ ರೊಂದಿಗೆ ಬಿಜೆಪಿ ಸದಸ್ಯರು ಮತಚಲಾಯಿಸಿ 14 ಮತಗಳನ್ನು ಪಡೆದು ಪರಾಭವಗೊಂಡರು.

ಕುತೂಹಲ ಕರೆಳಿಸಿದ್ದ ಇಲಕಲ್ಲ ನಗರಸಭೆ ಚುನಾವಣೆಯಲ್ಲಿ ಕೊನೆಗೂ ಶಾಸಕ ವಿಜಯಾನಂದ ಕಾಶಪ್ಪನವರ ಮೇಲುಗೈ ಸಾಧಿಸಿದ್ದು ಕಾಂಗ್ರೇಸ್‌ ಕಾರ್ಯಕರ್ತರು ಪಾಟಾಕಿ ಸಿಡಿಸಿ, ಸಿಹಿ ಸಂಚಿ ಸಂಭ್ರಮಾಚರಣೆ ಮಾಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕಾಶಪ್ಪನವರ ಬಿಜೆಪಿಯ ದುರಾಡಳಿತದಿಂದ ಬೇಸತ್ತು ಬಿಜೆಪಿ ಸದಸ್ಯರು ಕಾಂಗ್ರೇಸಿಗೆ ಮತ ಹಾಕಿದ್ದಾರೆ,ಅಲ್ಲದೇ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ರ ದುರಾಡಳಿತ ,ಅವರ ತಾರತಮ್ಯ,ನೀತಿಯಿಂದ ಬೇಸತ್ತು ಸ್ವಯಂ ಪ್ರೇರಿತರಾಗಿ ನಮ್ಮ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ.ಅವರಿಗೆ ತುಂಬು ಹೃದಯದ ಧನ್ಯವಾದ ತಿಳಿಸುತ್ತೇನೆ ಎಂದರು.ಈ ಸಂದರ್ಭದಲ್ಲಿ ನಗರಸಭೆಯ  ಎಲ್ಲ ಕಾಂಗ್ರೆಸ್ ಸದಸ್ಯರು,ಮುಖಂಡರು,ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ :-ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!