Ad imageAd image

ಸುಧೀರ ವ್ಹಿ. ಕುಂಭೋಜಕರ ಯಕ್ಸಂಬಾ, ತಾ. ಚಿಕ್ಕೋಡಿ ಇವರಿಗೆ, ಪತ್ರಿಕೋದ್ಯಮದಲ್ಲಿ ತಾವು 27 ವರ್ಷಗಳ ಕಾಲ ಯಶಸ್ವೀಯಾಗಿ ಸೇವೆ.

Bharath Vaibhav
ಸುಧೀರ ವ್ಹಿ. ಕುಂಭೋಜಕರ ಯಕ್ಸಂಬಾ, ತಾ. ಚಿಕ್ಕೋಡಿ ಇವರಿಗೆ, ಪತ್ರಿಕೋದ್ಯಮದಲ್ಲಿ ತಾವು 27 ವರ್ಷಗಳ ಕಾಲ ಯಶಸ್ವೀಯಾಗಿ ಸೇವೆ.
WhatsApp Group Join Now
Telegram Group Join Now

ಚಿಕ್ಕೋಡಿ:-ಇವರಿಗೆ, ಪತ್ರಿಕೋದ್ಯಮದಲ್ಲಿ ತಾವು 27 ವರ್ಷಗಳ ಕಾಲ ಯಶಸ್ವೀಯಾಗಿ ಸೇವೆ.ಸಲ್ಲಿಸಿ, 28 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ತಮ್ಮ ಈ ಶುಭ: ಸಂಧರ್ಭಕ್ಕೆ ಹಾರ್ದಿಕ ಅಭಿನಂದನೆಗಳು,

ನಮ್ಮ ಚಿಕ್ಕೋಡಿ ಉಪ ವಿಭಾಗದಲ್ಲಿ ಬಹಳಷ್ಟು ಜನ ಒಳ್ಳೆಯ ಪತ್ರಕರ್ತರಿದ್ದಾರೆ, ಅವರಲ್ಲಿ ತಾವೂ ಸಹ ಒಬ್ಬರು, ತಾವುಗಳು 27 ವರ್ಷಗಳ ಕಾಲ ಸಂಯುಕ್ತ ಕರ್ನಾಟಕ ಕನ್ನಡದ ಒಂದೇ ” ದಿನ ಪತ್ರಿಕೆ” ಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿರುವಿರಿ, ಸುಧೀರ್ಘ ಕಾಲ ಬೇರೆ ಉದ್ಯಮಗಳ ಕಡೆಗೆ ವಲಸೆ ಹೋಗದೇ, ಎಂತಹ ಕಷ್ಟದ ಕಾಲಗಳು ಬಂದರೂ ಸಹ, ಈ ಪತ್ರಿಕೆಯನ್ನು ನಂಬಿ ಕಾಲ ಕಳೆದಿದ್ದೀರಿ,

ಪ್ರತಿ ದಿನ ಬೆಳಿಗ್ಗೆ 5 ಗಂಟೆಯ ಸುಮಾರಿಗೆ ಎದ್ದು, ಎಲ್ಲ ಭಾಷೆಗಳ ಪತ್ರಿಕೆಗಳನ್ನು ಓದುವ kತಮ್ಮ ಹವ್ಯಾಸ ಮಚ್ಚುವಂತಿದೆ, ಸೇವೆಯ ಉದ್ದಕ್ಕೂ ತಾವುಗಳು ಒಂದಿಷ್ಟೂ ಬದಲಾಗದೆ, 27 ವರ್ಷಗಳ ಹಿಂದೆ ಇರುವ ತಮ್ಮ ಸ್ವಭಾವವನ್ನು ಮುಂದೆವರಿಸಿಕೊಂಡು ನಡೆದಿದ್ದೀರಿ,

ಎಲ್ಲ ಕ್ಷೇತ್ರಗಳಲ್ಲಿಯ ಆಗು ಹೋಗುಗಳ ಹಾಗೂ ಸಮಸ್ಯೆಗಳನ್ನು ವರದಿ ಮಾಡುವ ಮೂಲಕ ಜನಮೆಚ್ಚುಗೆಯನ್ನು ಪಡೆದಿದ್ದೀರಿ, ವರದಿ ಮಾಡುವಾಗ ಸಿರಿವಂತರೋ, ಬಡವರೋ, ಅಧಿಕಾರಿಗಳೋ, ಅಮಾಯಕರೋ ಅನ್ನುವ ಭೇಧ ಭಾವ ತೋರದೇ, ಎಲ್ಲರನ್ನು ಸಮಾನರಾಗಿ ಗೌರವಿಸಿ ತಪ್ಪದೇ ವರದಿ ಮಾಡುವ ಮೂಲಕ ಕರ್ತವ್ಯ ಪ್ರಜ್ಞೆಯನ್ನು ತೋರಿದ್ದೀರಿ,

ಜನ ಮೆಚ್ಚುಗೆ ಪಡೆದ ತಮಗೆ ಹತ್ತು ಹಲವಾರು ಪ್ರಶಸ್ತಿ ಗೌರವ ದೊರೆಯುವ ಮೂಲಕ, ಸಮಾಜದ ಜನರ ಹೃದಯದಲ್ಲಿ ಮನೆ ಮಾಡಿಕೊಂಡಿದ್ದು ಸಂತೋಷದ ವಿಷಯವಾಗಿದೆ, ಬಹು ಭಾಷಾ ಬಲ್ಲವರಾದ ತಮಗೆ ಯಾವ ಭಾಷೆಯಲ್ಲಾದರೂ ಮಾಹಿತಿ ನೀಡಿದರೆ ಸಾಕು, ಅದನ್ನು ಕನ್ನಡಕ್ಕೆ ಅನುವಾದಿಸಿ ವರದಿ ಸಲ್ಲಿಸುವ ಸಾಮಾರ್ಥ್ಯ ತಮ್ಮದಾಗಿದೆ, ಸ್ನಾತಕೋತ್ತರ ಪದವಿ ಪಡೆದ ತಮ್ಮ ಕಾರ್ಯಗಳನ್ನು ಎಷ್ಟು ಪ್ರಶಂಸಿಸಿದರೂ ನಮಗೆ ಕಡಿಮೆ ಅನಿಸುತ್ತಿದೆ, ತಮ್ಮ ಪತ್ರಿಕೋದ್ಯಮದ ಪಯಣ ಇನ್ನು ಮುಂದೆಯು ಸಹ ರಭಸದಿಂದ ಸಾಗಲಿ, ಎಂದು ಹಾರೈಸುತ್ತಾ ವಂದನೆಗಳನ್ನು ಅರ್ಪಿಸುತ್ತೇವವೆ.ಚಂದ್ರಕಾಂತ್ ಹುಕ್ಕೇರಿ ಸಮಾಜ ಸೇವಕರು ಮಹಾವೀರನಗರ್ ಚಿಕ್ಕೋಡಿ.

ವರದಿ ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!