ಚಡಚಣ : ಸಮೀಪದ ಶ್ರೀ ದತ್ತ ಇಂಡಿಯಾ ಪ್ರಾ,ಲಿ,ಹಾವಿನಾಳ ಸಕ್ಕರೆ ಕಾರ್ಖಾನೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಕಬ್ಬು ಪೂರೈಕೆ ಮಾಡಿದ ರೈತರಿಗೆ ನಾಗರಪಂಚಮಿ ಹಬ್ಬದ ನಿಮಿತ್ಯವಾಗಿ ಪ್ರತಿ ಟನ್ ಕಬ್ಬಿಗೆ 500 ಗ್ರಾಂ (ಅರ್ಧಾ ಕಿಲೋ) ಸಕ್ಕರೆಯನ್ನು ವಿತರಿಸಲಾಗುವದು ಪ್ರತಿ ಕಿಲೋ ಸಕ್ಕರಿಗೆ 21:00 ರೂ ದರದಂತೆ ಕೊಡಲಾಗುವದು, ಇವತಿನಿಂದ ಸಕ್ಕರೆ ವಿತರಣೆ ಪ್ರಾರಂಭಗೊಂಡಿದ್ದು ದಿನಾಂಕ:-28/07/2025 ವರಗೆ ಸಕ್ಕರೆ ವಿತರಣೆ ಮಾಡಲಾಗುವದು ತದನಂತರ ಬಂದ ರೈತರಿಗೆ ಸಕ್ಕರೆ ವಿತರಣೆ ಮಾಡಲಾಗುವದಿಲ್ಲ, ಇದಕೆ ರೈತರೆ ಜವಾಬ್ದಾರರು ರೈತರು ಸಹಕರಿಸಬೇಕು, ಸಕ್ಕರೆ ವಿತರಣೆಯು ಶ್ರೀ ದತ್ತ ಇಂಡಿಯಾ ಪ್ರಾ.ಲಿ, ಹಾವಿನಳ ಸಕ್ಕರೆ ಕಾರ್ಖಾನೆಯಲ್ಲಿ ವಿತರಿಸಲಾಗುವುದೆಂದು ಕಂಪನಿಯ ಆಡಳಿತ ಮಂಡಳಿಯ ಉಪ ನಿರ್ದೇಶಕರಾದ ಮೃತ್ಯುಂಜಯ ಶಿಂಧೆ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಮುಂಬರುವ ಹಂಗಾಮು 2025-26 ನೇಯ ಸಾಲಿನ ಸಲುವಾಗಿ ತಾವು ಬೆಳೆದ ಎಲ್ಲಾ ಕಬ್ಬಿನ ನೋಂದಣಿ ಮಾಡಿಸಿ ನಮ್ಮ ಕಾರ್ಖಾನೆಗೆ ನುರಿಸಲು ಕಳುಹಿಸಿ ಸಹಕರಿಸಬೇಕೆಂದು ರೈತರಲ್ಲಿ ವಿನಂತಿಸಿದರು. ಕಬ್ಬು ಪೂರೈಕೆ ಮಾಡಿದ ರೈತರಿಗೆ ೧೫ ದಿನದೊಳಗೆ ಅವರವರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುವದು ಎಂದು ಹೇಳಿದರು.
ಈ ಸಂಧರ್ಬದಲ್ಲಿ ಕಂಪನಿಯ ಅಧಿಕಾರಿಗಳಾದ ಕಬ್ಬು ವಿಬಾಗದ ಅಸಿಸ್ಟಂಟ್ ಜನರಲ ಮ್ಯಾನೇಜರ ಅನಿರುದ್ಧ ಪಾಟೀಲ, ಶೇತಿ ಅಧಿಕಾರಿ ರವೀಂದ್ರ ಬಿರಾಜದಾರ ಯುನಿಟಹೆಡ್ಡ ಸುಬ್ಬುರತಂ ಇಂಜನಿಯರಿಂಗ ವಿಭಾಗದ ಅಸಿಸ್ಟಂಟ್ ಜನರಲ ಮ್ಯಾನೇಜರ ಜಿತೇಂದ್ರ ಮೆಟಕರಿ ಪ್ರೋಸಸ ಮ್ಯನೆಜರ ಕುಂಬಾರ ಎಚ್ ಆರ್ ಮ್ಯಾನೇಜರ್ ವಿಜಯಕುಮಾರ ಹತ್ತುರೆ ಮತ್ತು ಕಬ್ಬು ವಿಭಾಗದ ಎಲ್ಲ ಅದಿಕಾರಿಗಳು ಕಾರಖಾನೆಯಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವರದಿ : ಉಮಾಶಂಕರ ಕ್ಷತ್ರಿ




