ರಾಮದುರ್ಗ: ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ತುರನೂರ ಗ್ರಾಮದ ಪ್ಲಾಟನಲ್ಲಿ ನಿವಾಸಿಯಾಗಿರುವ ಸುಧಾ ದೇಶುರ ಎಂಬ ಯುವತಿ ವಯಸ್ಸು22 ತನ್ನ ಸ್ವಂತ ಮನೆಯಲ್ಲಿ ಪ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ.
ಈ ಆತ್ಮಹತ್ಯೆಗೆ ಯಾರೂ ಕಾರಣ ಎಂದು X ಪ್ರಶ್ನೆಯಾಗಿದೆ ನೇಣು ಬಿಗಿದುಕೊಳ್ಳುವುದರ ಬಗ್ಗೆ ಯಾವದೆ ಕಾರಣ ತಿಳಿದು ಬಂದಿಲ್ಲ.

ರಾಮದುರ್ಗ ತಾಲೂಕ ಆಸ್ಪತ್ರೆಯಲ್ಲಿ ಸುಧಾನ ತಾಯಿ ಮಹಾದೇವಿ ದೇಶುರ್ D ಗ್ರೂಪ್ ದರ್ಜೆಯಲ್ಲಿ ಕೆಲಸ ನೀರವಹಿಸಿತಿದ್ದರು 2ವರ್ಷದ ಹಿಂದೆ ಕ್ಯಾನ್ಸರನಿಂದ ಮರಣ ಹೊಂದಿದ್ದಾರೆ ತಾಯಿ ನೌಕರಿ ಮಗಳ ಸುಧಾಗೆ ಅನುಕಂಪದ ಆಧಾರ ಮೇಲೆ ಬಂದಿತ್ತು.
ಸುಧಾ ಈಗತಾನೆ 1/2ವರ್ಷದಿಂದ ಬೆಳಗಾವಿ TB ಸೆಂಟರನಲ್ಲಿ S D A ಯಾಗಿ ಕಾರ್ಯನಿರವಹಿಸಿತಿದ್ದರು ತುರನೂರ ಗ್ರಾಮಕ್ಕೆ 2,3ದಿನಗಳ ಹಿಂದೆ ಅಷ್ಟೇ ಮನೆಗೆ ಬಂದಿದಳು ಈ ಒಂದು ಆತ್ಮಹತ್ಯೆ ಘಟನೆ ಬಗ್ಗೆ ಆಸಪಾಸನಲ್ಲಿ ಇರುವ ಸಾರ್ವಜನಿಕರಿಗೆ ದೂರವಾಸನೆ ಬಂದ್ ನಂತರ ಗೊತ್ತಾಗಿದೆ, ವಿಷಯ ತಿಳಿದು ತಕ್ಷಣ ರಾಮದುರ್ಗ ಪೊಲೀಸ್ ಠಾಣೆಗೆ ಸ್ಥಳೀಯರು ವಿಷಯ ತಿಳಿಸಿದ್ದಾರೆ ವಿಷಯ ತಿಳಿದ ತಕ್ಷಣ ರಾಮದುರ್ಗ ಪೊಲೀಸ್ ಅಧಿಕಾರಿಯಾದ ನಿಂಗಪ್ಪ ಕೆಂಪಶಿವಣ್ಣನವರ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆತ್ಮಹತ್ಯೆಗೆ ಕಾರಣ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವರದಿ: ಮಂಜುನಾಥ ಕಲಾದಗಿ




