ಹುಮನಾಬಾದ : ತಾಲ್ಲೂಕಿನ ಹುಡಗಿ ಗ್ರಾಮ ಪಂಚಾಯಿತಿ ಅಧ್ಯಕ್ಷಸ್ಥಾನ ತೆರವಾಗಿದ್ದ ಕಾರಣ ಗುರುವಾರ ನಡೆದ ಚುನಾವಣೆಯಲ್ಲಿ ಸುಜೇತಾ ಪ್ರದೀಪ ರಂಜೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗ್ರಾಪಂ ಅಧ್ಯಕ್ಷರಾಗಿದ್ದ ಅಂಬಮ್ಮಾ ಹನುಮಂತ ಅವರು ಸ್ವಯಿಚ್ಛೆಯಿಂದ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.ಅದರ ನಿಮಿತ್ಯ ಗುರುವಾರ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು.ಅಧ್ಯಕ್ಷ ಸ್ಥಾನದ ಚುನಾವಣೆಗೆ ಸುಜೇತಾ ಒಬ್ಬರೇ ನಾಮ ಪತ್ರ ಸಲ್ಲಿಕೆ ಮಾಡಿದ್ದರಿಂದ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಚುನಾವಣಾಧಿಕಾರಿಯೂ ಆದ ದೀಪಿಕಾ ನಾಯ್ಕರ ಅವರು ತಿಳಿಸಿದರು.
ಬಳಿಕ ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ ಸುಜೇತಾ ಅವರಿಗೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪ್ರದೀಪ ರಂಜೇರಿ,ಕಾಶಿನಾಥ ಸೋನಿ,ಸಚಿನ ಹೊಸಳ್ಳಿ,ಶ್ರೀಮಂತ ಲಕ್ ಲಕ್,ಮೋಹನ ಬೀರನ್ನಳ್ಳಿ,ನವೀನ ನಾಗನಕೇರಾ,ಸಂಪತ ದರ್ಗೆ,ಪ್ರತ್ವಿರಾಜ್ ಕೋಟೆ,ಶ್ರೀನಿವಾಸ ಸೇರಿದಂತೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರು,ಸದಸ್ಯರು ಇದ್ದರು.




