ಮುದಗಲ್ : ಪಟ್ಟಣ ಸಮೀಪದ ಸುಕ್ಷೇತ್ರ ಅಂಕಲಿಮಠದ ಶ್ರೀ ಮಾತೋಶ್ರೀ ಪಾರ್ವತಮ್ಮ ಅಮ್ಮನವರ ಮಂಗಳ ಭವನ ಲೋಕಾರ್ಪಣೆ ನಿಮಿತ್ಯ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಬುಧುವಾರ ಜರುಗಿತು ದಾಸೋಹ ಮೂರ್ತಿ ಪರಮ ಪೂಜ್ಯ ಶ್ರೀ ವೀರಭದ್ರ ಮಹಾಸ್ವಾಮಿಗಳು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.
ಕಂಬಳಿಹಾಳ -ನಂದವಾಡಗಿ ಪರಮ ಪೂಜ್ಯ ಶ್ರೀ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು . ಬೆಳಗ್ಗೆ ಸುಕ್ಷೇತ್ರ ಅಂಕಲಿಮಠದಲ್ಲಿ ಸದ್ಗುರು ಶ್ರೀ ನಿರುಪಾಧೀಶ್ವರ ಹಾಗೂ ಮಾತೋಶ್ರೀ ಪಾರ್ವತಮ್ಮನವರ ಕರ್ತೃ ಗದ್ದುಗೆಗೆ ಮಹಾರುದ್ರಭಿಕ್ಷೇಕ ಹಾಗೂ ವಟುಗಳಿಗೆ ಅಯ್ಯಾಚಾರ ನಡೆಯಿತು.
ಈ ಸಂದರ್ಭದಲ್ಲಿ ಅಂಕಲಿಮಠದ ಪರಮ ಪೂಜ್ಯ ಶ್ರೀ ಫಕೀರೇಶ್ವರ ಮಹಾಸ್ವಾಮಿಗಳು. ತುರವಿಹಾಳ ಪರಮ ಪೂಜ್ಯ ಅಮರಗುಂಡ ದೇವರು. ಸಾಬಣ್ಣ ಅಂಕಲಿಮಠ. ಅಮರಯ್ಯ ಸ್ವಾಮಿ ಸೇರಿದಂತೆ ಮಹಿಳೆಯರು ಹಾಗೂ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.
ವರದಿ:- ಮಂಜುನಾಥ ಕುಂಬಾರ