ಚಿಂಚೋಳಿ:ಕಲ್ಬುರ್ಗಿ ಜಿಲ್ಲೆ, ಚಿಂಚೋಳಿ ತಾಲೂಕಿನ ಸೇಡಂ ವಿಧಾನಸಭಾ ಕ್ಷೇತ್ರದ ಸುಲೇಪೇಟ ಗ್ರಾಮದಲ್ಲಿ ಸುಲೇಪೇಟ ಯಿಂದ ಚಿಂಚೋಳಿಗೆ ಸುಲೇಪೇಟ ಯಿಂದ ಸೇಡಂ ಗೆ ಸುಲೇಪೇಟ ಯಿಂದ ಕಲ್ಬುರ್ಗಿಗೆ ಸುಲೇಪೇಟ್ ಇಂದ ಹುಮ್ನಾಬಾದ್ ರಸ್ತೆ ಈ ನಾಲ್ಕು ದಿಕ್ಕಿನ ರಸ್ತೆ ಸಂಪೂರ್ಣವಾಗಿ ಹದಗಟ್ಟು ತೆಗ್ಗು ಗುಂಡಿಗಳಿಂದ ಕೂಡಿದೆ ಈ ರಸ್ತೆ ಮೇಲೆ ದಿನನಿತ್ಯ ಸರ್ಕಾರಿ ಅಧಿಕಾರಿಗಳು ಶಾಸಕರು ಸಚಿವರು ತಾಲೂಕು ದಂಡಾಧಿಕಾರಿಗಳು ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಹಲವಾರು ಅಧಿಕಾರಿಗಳು ಈ ರಸ್ತೆ ಮೂಲಕ ತಮ್ಮ ತಮ್ಮ ಕೆಲಸಕ್ಕೆ ತೆರಳುತ್ತಾರೆ ರಸ್ತೆ ಅವರಿಗೆ ಕಣ್ಣಿಗೆ ಕಾಣಿದರೂ ಕೂಡ ಕಣ್ಣು ಮುಚ್ಚಿಕೊಂಡು ತಮ್ಮ ಕಾರು ಒಳಗಡೆ ಹೋಗುತ್ತಾರೆ ಆದರೆ ತೊಂದರೆ ಆಗೋದು ಸಾರ್ವಜನಿಕರಿಗೆ.

ಸಾರ್ವಜನಿಕರು ಏನು ಹೇಳಿದರೂ ಕೂಡ ಸಚಿವರು ಶಾಸಕರು ಅವರ ಮಾತಿಗೆ ಎಷ್ಟು ಬೆಲೆ ಕೊಡದನೆ ರಸ್ತೆ ಪ್ಯಾಚ್ ವರ್ಕ್ ಮಾಡಿ ನಿಲ್ಲಿಸುತ್ತಾರೆ ನಂತರ ಮಳೆ ಬಂದಾಗ ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿ ಅದು ಯಥಾರೀತಿಯಾಗಿ ತಗ್ಗು ಗುಂಡಿಗಳು ಬೀಳುತ್ತವೆ ಎಷ್ಟೋ ದ್ವಿಚಕ್ರ ವಾಹನ ಸವಾರರು ಬಿದ್ದಿರುವಂತ ಉದಾಹರಣೆ ನಾವು ನೋಡುತ್ತೇವೆ.
ಸಂಬಂಧ ಪಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಅಧಿಕಾರಿಗಳು ತಮ್ಮ ಎರಡೂ ಕಣ್ಣುಗಳನ್ನು ತೆಗೆದು ನೋಡಿ ರಸ್ತೆ ಸುಧಾರಣೆ ಮಾಡಿ ರಸ್ತೆ ಅಕ್ಕಪಕ್ಕದಲ್ಲಿರುವಂತ ಅಂಗಡಿಗಳಿಗೆ ಹೋಟೆಲ್ಗಳಿಗೆ ರಸ್ತೆ ಮೇಲೆ ನಿಂತಿರುವಂತ ನೀರು ವಾಹನ ಬಂದಾಗ ಸಾರ್ವಜನಿಕರ ಮೇಲೆ ಸಿಡಿಯುವಂತ ಪರಿಸ್ಥಿತಿ ನಾವು ನೋಡುತ್ತೇವೆ.
ವರದಿ: ಸುನಿಲ್ ಸಲಗರ




