ಸೇಡಂ : ದಿ. 15/03/2026 ರಂದು ದಲಿತ ಸೇನೆ ತಾಲೂಕ ಘಟಕ ವತಿಯಿಂದ ರಾಜ್ಯಾಧ್ಯಕ್ಷರಾದ ಹಣಮಂತ ಜಿ ಯಳಸಂಗಿ ಅವರ ಆದೇಶದ ಮೇರೆಗೆ ಹಾಗೂ ಜಿಲ್ಲಾಧ್ಯಕ್ಷರಾದ ಮಂಜುನಾಥ್ ಭಂಡಾರಿ ಅವರ ಮಾರ್ಗದರ್ಶನದಲ್ಲಿ ತಾಲೂಕಾಧ್ಯಕ್ಷರಾದ ಮೈಲಾರಿ ಹೆಚ್ ಕಾಸ್ಕರ್ ಅವರ ನೇತೃತ್ವದಲ್ಲಿ ಸೇಡಂ ತಾಲೂಕು ದಲಿತ ಸೇನೆ ಯುವ ಘಟಕ ಅಧ್ಯಕ್ಷರಾಗಿ ಸುಮನ್ ದೊಡ್ಮನಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮೈಲಾರಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ತಾಲೂಕ ಉಪಾಧ್ಯಕ್ಷರಾಗಿ ಮಹೇಂದ್ರ ಗುಂಡುಗುರ್ತಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಸಂಘದ ತತ್ವಸಿದ್ಧಾಂತಗಳನ್ನು ಅಳವಡಿಸಿಕೊಂಡು ಅನ್ಯಾಯದ ವಿರುದ್ಧ ಹೋರಾಟ ಮಾಡಿ ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ದಲಿತ ಸೇನೆ ತಾಲೂಕ ಅಧ್ಯಕ್ಷರಾದ ಮೈಲಾರಿ ಹೆಚ್ ಕಾಸ್ಕರ್, ತಾಲೂಕ ಉಪಾಧ್ಯಕ್ಷರಾದ ದಶರಥ ಮಾದವರ ಸೇರಿದಂತೆ ದಲಿತ ಸೇನೆ ಕಾರ್ಯಕರ್ತರು ಹಾಗೂ ಹೋರಾಟಗಾರರು ಭಾಗಿಯಾಗಿದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




