Ad imageAd image

ಏ.5 ರಂದು ವೀರಶೈವ ಲಿಂಗಾಯತ ಸಮಾಜದ ವಿದ್ಯಾರ್ಥಿಗಳಿಗೆ ಬೇಸಿಗೆ ತರಬೇತಿ ಶಿಬಿರ

Bharath Vaibhav
ಏ.5 ರಂದು ವೀರಶೈವ ಲಿಂಗಾಯತ ಸಮಾಜದ ವಿದ್ಯಾರ್ಥಿಗಳಿಗೆ ಬೇಸಿಗೆ ತರಬೇತಿ ಶಿಬಿರ
WhatsApp Group Join Now
Telegram Group Join Now

ಮಾನ್ವಿ:ಪಟ್ಟಣದ ಪತ್ರಿಕಾ ಭವನದಲ್ಲಿ ಅ.ಭಾ,ವೀ,ಲಿಂಗಾಯತ ಮಹಾಸಭಾ
ತಾ.ಘಟಕದ ಅಧ್ಯಕ್ಷ ಅರುಣಕುಮಾರ ಚಂದಾ ಮಾತನಾಡಿ ತಾಲೂಕಿನ
ವೀರಶೈವ ಲಿಂಗಾಯತ ಸಮಾಜದ ವಿದ್ಯಾರ್ಥಿಗಳು 10 ನೇತರಗತಿ ವಾರ್ಷಿಕ
ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯುವುದಕ್ಕೆ ಸಾಧ್ಯವಾಗಲಿ
ಎನ್ನುವ ಉದ್ದೇಶದಿಂದ ಪಟ್ಟಣದ ಪ್ರಗತಿ ಪಿ.ಯು.ಕಾಲೇಜಿನಲ್ಲಿ ಅ.ಭಾ,ವೀ,
ಲಿಂಗಾಯತ ಮಹಾಸಭಾ ಹಾಗೂ ತಾ.ವೀರಶೈವ ಲಿಂಗಾಯತ ಮಹಾಸಭಾ
ವತಿಯಿಂದ ಏ.5 ರಂದು ವೀರಶೈವ ಲಿಂಗಾಯತ ಸಮಾಜದ 9 ನೇತರಗತಿ
ಉತ್ತೀರ್ಣರಾಗಿ ಎಸ್.ಎಸ್.ಎಲ್.ಸಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗಾಗಿ 45 ದಿನಗಳ
ಬೇಸಿಗೆ ತರಬೇತಿ ಶಿಬಿರವನ್ನು ಅಯೋಜಿಸಲಾಗಿದ್ದು

ತರಬೇತಿ ಶಿಬಿರವನ್ನು ರಾಯಚೂರು ಶಾಸಕ ಡಾ.ಶಿವರಾಜ ಪಾಟೀಲ್ ಉದ್ಘಾಟಿಸಲಿದ್ದು ಒಳಬಳ್ಳಾರಿ
ವಿರಕ್ತಮಠದ ಶ್ರೀ ಸಿದ್ದಲಿಂಗಮಹಾಸ್ವಾಮಿಗಳು ,ಶ್ರೀ ಶಾಂತಮಲ್ಲ
ಮಹಾಸ್ವಾಮಿಗಳು.ಕಲ್ಮಠ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಚಾರ್ಯ
ಮಹಾ ಸ್ವಾಮಿಗಳು,ಸೇರಿದಂತೆ ನಾಡಿನ ವಿವಿಧ ಮಠಗಳ ಶ್ರೀಗಳು
ದಿವ್ಯಸಾನಿಧ್ಯವನ್ನು ವಹಿಸಲಿದ್ದಾರೆ.

ಡಾ.ಬಸವಫ್ರಭು ಪಾಟೀಲ್ ಬೆಟ್ಟದೂರು,
ಅ.ಭಾ,ವೀ,ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ
ಮಿರ್ಜಾಪೂರ ಸೇರಿದಂತೆ ಮಾಜಿ ಶಾಸಕ ಬಸವನಗೌಡ ಬ್ಯಾಗವಾಟ್ ಸೇರಿದಂತೆ
ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ ತರಬೇತಿಯನ್ನು
ಪಡೆಯುವುದಕ್ಕೆ ಆಸಕ್ತಿ ಇರುವ ವಿದ್ಯಾರ್ಥಿಗಳು ತಮ್ಮ
ಹೆಸರುಗಳನ್ನು ನೊಂದಾಯಿಸಿಕೊAಡು ತರಬೇತಿಯನ್ನು
ಪಡೆದುಕೊಳ್ಳುವಂತೆ ಕೋರಿದರು.
ಜಗದೀಶ ಓತೂರು ಮಾತನಾಡಿದರು.

ತಾ.ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ
ಹರಿಹಾರಪಾಟೀಲ್,ಗೌರವಾಧ್ಯಕ್ಷರಾದ ಶ್ರೀಧರ ಸ್ವಾಮಿ, ವೀರನಗೌಡ,
ಶಿವಶಂಕರಯ್ಯಸ್ವಾಮಿ, ವೀರುಪಾಕ್ಷಗೌಡ ನುಗಡೋಣಿ,ಜನಾರ್ಧನ
ಪಾಟೀಲ್,ಶಶಿ ಶೇಖರ,ಎಸ್.ಅನುರಾಧ ಪಾಟೀಲ್,ಕಿರಣ್ ಪಾಟೀಲ್,ಮಂಜೂನಾಥ
ಪಾಟೀಲ್,ರAಗನಗೌಡ ಪಾಟೀಲ್,ಶಿವಲಿಂಗಯ್ಯಸ್ವಾಮಿ,ಡಾ.ಮಲ್ಲಿಕಾರ್ಜುನ
ಬಿ.ವಿಶ್ವನಾಥ,ಪಾಟೀಲ್,ಸೂಗಪ್ಪಗೌಡ,ವಿಜಯ ಮಹಾಂತೇಶ ಸೇರಿದಂತೆ
ಇನ್ನಿತರರು ಇದ್ದರು.
ತರಬೇತಿಗೆ ನೊಂದಾಯಿಸಿ ಕೊಳ್ಳುವವರು ಹೆಚ್ಚಿನ ಮಾಹಿತಿಗಾಗಿ
ದೂ.ಸಂಖ್ಯೆ 8197704409,7892455674,7975135184,9845805212
ಸಂಪರ್ಕಿಸಬಹುದಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!