ಮುಂಬೈ: ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ 33 ನೇ ಲೀಗ್ ಪಂದ್ಯ ಇಂದು ಸಾಯಂಕಾಲ 7:30 ಕ್ಕೆ ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಪಾಯಿಂಟ್ ಪಟ್ಟಿಯಲ್ಲಿ ಕೆಳಗಿನ ಸ್ಥಾನ ಹೊಂದಿರುವ ಸನ್ ರೈಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿವೆ.
ಮುಂಬೈ ಇಂಡಿಯನ್ಸ್ 6 ಪಂದ್ಯಗಳಿಂದ 4 ಅಂಕಗಳನ್ನು ಮಾತ್ರ ಪಡೆದಿದ್ದು, 7 ನೇ ಸ್ಥಾನದಲ್ಲಿದೆ. ಇಷ್ಟೇ ಪಂದ್ಯಗಳಿಂದ 4 ಅಂಕಗಳನ್ನೇ ಗಳಿಸಿರುವ ಸನ್ ರೈಸ್ ಹೈದರಾಬಾದ್ 9 ನೇ ಸ್ಥಾನದಲ್ಲಿದೆ. ಹೀಗಾಗಿ ಇಂದು ಸಾಯಂಕಾಲ ನಡೆಯುವ ಈ ಪಂದ್ಯ ಉಭಯ ತಂಡಗಳಿಗೆ ಮಹತ್ವದ ಪಂದ್ಯವಾಗಿದೆ.