Ad imageAd image

ಸನ್ ರೈಸ್ ಹೈದರಾಬಾದ್ ಸಹ ಮಾಲಕಿ ಕಾವ್ಯ ಮಾರನ್ ಗೆ ಕಾರು ಕ್ರೇಜ್

Bharath Vaibhav
ಸನ್ ರೈಸ್ ಹೈದರಾಬಾದ್ ಸಹ ಮಾಲಕಿ ಕಾವ್ಯ ಮಾರನ್ ಗೆ ಕಾರು ಕ್ರೇಜ್
WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲಿ ಐಪಿಎಲ್‌ನ 18ನೇ ಸೀಸನ್ ಸಖತ್​ ಕ್ರೇಜ್​ ಮೂಡಿಸುತ್ತಿದೆ. ಸದ್ಯ ಸನ್‌ರೈಸರ್ಸ್ ಹೈದರಾಬಾದ್ ಸಹ-ಮಾಲಕಿ ಕಾವ್ಯಾ ಮಾರನ್ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಕ್ರಿಕೆಟ್ ಮೇಲಿನ ಪ್ರೀತಿ. ಇದಷ್ಟೇ ಅಲ್ಲ, ಕಾವ್ಯ ಮಾರನ್ ಅವರಿಗೆ ಕಾರ್‌ ಕ್ರೇಜ್‌ ಬಹಳಷ್ಟಿದೆ. ಇದಕ್ಕೆ ಅವರ ಗ್ಯಾರೇಜ್‌ನಲ್ಲಿ ನಿಲ್ಲಿಸಲಾಗಿರುವ ಐಷಾರಾಮಿ ಕಾರುಗಳೇ ಸಾಕ್ಷಿ. ರೋಲ್ಸ್ ರಾಯ್ಸ್‌ನಿಂದ ಹಿಡಿದು ಫೆರಾರಿ ರೋಮಾವರೆಗೆ ಹಲವು ದುಬಾರಿ ಕಾರುಗಳು ಇವರಲ್ಲಿವೆ.

Rolls-Royce Phantom VIII EWB: ಕಾವ್ಯಾ ಮಾರನ್ ಅವರ ಮೊದಲ ಕಾರು ರೋಲ್ಸ್ ರಾಯ್ಸ್ ಫ್ಯಾಂಟಮ್ VIII ಇಡಬ್ಲ್ಯೂಬಿ. ಇದರ ಬೆಲೆ 12 ಕೋಟಿ 20 ಲಕ್ಷ ರೂಪಾಯಿ. ಈ ಕಾರಿನಲ್ಲಿ ನೀವು 6.75-ಲೀಟರ್ V12 ಟ್ವಿನ್-ಟರ್ಬೋಚಾರ್ಜ್ಡ್ ಎಂಜಿನ್ ಪಡೆಯುತ್ತೀರಿ ಮತ್ತು 21-ಇಂಚಿನ ಅಲಾಯ್ ವೀಲ್ಸ್​ ಅನ್ನು ಇದು ಹೊಂದಿದೆ. ಎಂಜಿನ್ 571 hp ಪವರ್ ಮತ್ತು 900 Nm ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ.

Bentley Bentayga EWB: ಇವರ ಎರಡನೇ ದುಬಾರಿ ಕಾರು ಬೆಂಟ್ಲಿ ಬೆಂಟೇಗಾ ಇಡಬ್ಲ್ಯೂಬಿ. 22 ಇಂಚಿನ ವೀಲ್‌ಗಳಿವೆ. ಬೆಲೆ ಸುಮಾರು 6 ಕೋಟಿ ರೂಪಾಯಿ. 4.0-ಲೀಟರ್ ಟ್ವಿನ್ ಟರ್ಬೊ V8 ಎಂಜಿನ್ ಹೊಂದಿದ್ದು, 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ ಬರುತ್ತದೆ.

BMW i7: ಇವರ ಮೂರನೇ ಕಾರು BMW i7. ಇದು ಭಾರತೀಯ ಮಾರುಕಟ್ಟೆಯಲ್ಲಿ 2.03 ಕೋಟಿ ರೂ.ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. BMW i7 101.7 kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣವಾಗಿ ಚಾರ್ಜ್ ಮಾಡಲು 50 ನಿಮಿಷ ತೆಗೆದುಕೊಳ್ಳುತ್ತದೆ. ಕಾರಿನ ವ್ಯಾಪ್ತಿ 603 ಕಿಲೋಮೀಟರ್‌ವರೆಗೆ ಇರುತ್ತದೆ.

Ferrari Roma: ಕಾವ್ಯಾರ ಐಷಾರಾಮಿ ಕಾರು ಸಂಗ್ರಹದಲ್ಲಿರುವ ನಾಲ್ಕನೇ ಕಾರು ಫೆರಾರಿ ರೋಮಾ. ಕೆಂಪು ಬಣ್ಣದ ರೇಸಿಂಗ್ ಕಾರು. ಬೆಲೆ ಸುಮಾರು 4.5 ಕೋಟಿ ರೂಪಾಯಿ. 3.4 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿ.ಮೀ ವೇಗದಲ್ಲಿ ಓಡಬಲ್ಲದು

WhatsApp Group Join Now
Telegram Group Join Now
Share This Article
error: Content is protected !!