ಕೋಲ್ಕತ್ತಾ: ಅಂಕ್ರೀಶ್ ರಘುವಂಶಿ ಅವರ ಬಿರುಸಿನ ಅರ್ಧ ಶತಕ ಹಾಗೂ ಅಜಿಂಕೆ ರೆಹಾನೆ ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸನ್ ರೈಸ್ ಹೈದರಾಬಾದ್ ವಿರುದ್ಧ ಇಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯ ಲೀಗ್ ಪಂದ್ಯದಲ್ಲಿ ಎದುರಾಳಿ ತಂಡಕ್ಕೆ 185 ರನ್ ಗಳ ಗೆಲುವಿನ ಗುರಿ ನೀಡಿತು.
ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಆರಂಭ ಚೆನ್ನಾಗಿರಲಿಲ್ಲ. ಆದರೆ ಮಧ್ಯಮ ಕ್ರಮಾಂಕದಲ್ಲಿ ರಘುವಂಶಿ ಹಾಗೂ ಅಜಿಂಕೆ ರೆಹಾನೆ ಉಪಯುಕ್ತ ಪಾಲುಗಾರಿಕೆ ನಡೆಸಿ ತಂಡವನ್ನು ಉತ್ತಮ ಮೊತ್ತದೆಡೆಗೆ ಕೊಂಡೊಯ್ದರು. ರಘುವಂಶಿ ಸರಿಯಾಗಿ ಅರ್ಧ ಶತಕ 50 ರನ್ ಗಳನ್ನು 32 ಎಸೆತಗಳಲ್ಲಿ 5 ಬೌಂಡರಿ 2 ಸಿಕ್ಸರ್ ನೆರವಿನಿಂದ ಗಳಿಸಿದರೆ, ರೆಹಾನೆ 27 ಎಸೆತಗಳಲ್ಲಿ 1 ಬೌಂಡರಿ 4 ಸಿಕ್ಸರ್ ನೆರವಿನಿಂದ 38 ರನ್ ಗಳಿಸಿದರು.
ವೆಂಕಟೇಶ ಅಯ್ಯರ ಅರ್ಧ ಶತಕ: ನಂತರ ಎಡಗೈ ಬ್ಯಾಟುಗಾರ ವೆಂಕಟೇಶ ಕೇವಲ 26 ಎಸೆತಗಳಲ್ಲಿ ಅರ್ಧ ಶತಕ ಗಳಿಸಿದರು. ಅವರು 6 ಬೌಂಡರಿ 2 ಸಿಕ್ಸರ್ ಚಚ್ಚಿದರು. ನಂತರ ಅವರು 29 ಎಸೆತಗಳಲ್ಲಿ 60 ರನ ಗಳಿಸಿ ವಿಕೆಟ್ ಒಪ್ಪಿಸಿದರು. ವೆಂಕಟೇಶ ಅಯ್ಯರ ಹಾಗೂ ರಿಂಕು ಪಾಲುಗಾರಿಕೆ ಅತಿ ವೇಗವಾಗಿ 100 ರನ್ ಗಳ ಹರಿದು ಬಂದಿದ್ದರಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 200 ರ ಗಡಿ ತಲುಪಲು ಸಾಧ್ಯವಾಯಿತು.