ಅಹ್ಮದಾಬಾದ: ಗುಜರಾತ್ ಟೈಟನ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇಂದು ಸಾಯಂಕಾಲ 7:30 ಕ್ಕೆ ಸನ್ ರೈಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯ ಎರಡೂ ತಂಡಗಳಿಗೂ ಮಹತ್ವದ ಪಂದ್ಯವಾಗಿದ್ದು, ಸನ್ ರೈಸ್ ಹೈದರಾಬಾದ್ ತಂಡಕ್ಕಂತೂ ಮಾಡು ಇಲ್ಲವೇ ಮಡಿ ಪಂದ್ಯವಾದಂತಿದೆ. ಸನ್ ರೈಸ್ ಹೈದರಾಬಾದ್ ತಂಡ 9 ಪಂದ್ಯಗಳಿಂದ 6 ಅಂಕಗಳಿಸಿದ್ದು, ಈ ಪಂದ್ಯವನ್ನು ಗೆಲ್ಲುವ ನಿವಾರ್ಯತೆಯಲ್ಲಿದೆ. ಆದರೆ ಇತ್ತ ಗುಜರಾತ್ ಟೈಟನ್ಸ್ ತಂಡ 9 ಪಂದ್ಯಗಳಿಂದ 12 ಅಂಕಗಳಿಸಿದ್ದು, ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.




