ಮ್ಯಾಂಚೆಸ್ಟರ್: ಮಧ್ಯಮ ಕ್ರಮಾಂಕದ ಬ್ಯಾಟುಗಾರರಾದ ರವೀಂದ್ರ ಜಡೆಜಾ ಹಾಗೂ ವಾಷಿಂಗ್ಟನ್ ಸುಂದರ್ ಅವರ ಜವಾಬ್ದಾರಿ ಆಟ ಹಾಗೂ ಈ ಇಬ್ಬರು ವೈಯಕ್ತಿಕವಾಗಿ ಸಿಡಿಸಿದ ಶತಕಗಳು ಹಾಗೂ ಈ ಇಬ್ಬರ ನಡುವೆ ನಡೆದ ಮಹತ್ವದ ಪಾಲುಗಾರಿಕೆ ಭಾರತ ತಂಡವನ್ನು ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ನೆರವಾದವು.

ಎಮಿರೆಟ್ಸ್ ಓಲಟ್ರೆಪಿಡ್ ಮೈದಾನದಲ್ಲಿ ನಡೆದ ಕಡೆಯ ದಿನದ ಪಂದ್ಯದಲ್ಲಿ ರವೀಂದ್ರ ಜಡೆಜಾ ಹಾಗೂ ವಾಷಿಂಗ್ಟನ್ ಸುಂದರ್ ಅದೆಷ್ಟು ಉತ್ತಮವಾಗಿ ಬ್ಯಾಟ್ ಮಾಡಿದರೆಂದರೆ ಟೆಸ್ಟ್ ಪಂದ್ಯ ಗೆಲ್ಲುವ ಅವಕಾಶ ಹೊಂದಿದ್ದ ಇಂಗ್ಲೆಂಡ್ ಗೆ ಒಂದಿಷ್ಟು ಅವಕಾಶ ನೀಡದಂತೆ ತಾಳ್ಮೆಯಿಂದ ಬ್ಯಾಟಿಂಗ್ ನಡೆಸಿ ಅರಾಮವಾಗಿ ಪಂದ್ಯವನ್ನು ಡ್ರಾ ಮಾಡಿಕೊಂಡರು.
ರನ್ ಖಾತೆ ತೆರೆಯದೇ 2 ವಿಕೆಟ್ ಕಳೆದುಕೊಂಡಿದ್ದ ಭಾರತ ಅಕ್ಷರಸ ಸೋಲಿನ ದವಡೆಯಲ್ಲಿತ್ತು. ಆದರೆ ಮೊದಲು ಕೆ.ಎಲ್. ರಾಹುಲ್ ಹಾಗೂ ನಾಯಕ ಶುಭಮಾನ್ ಗಿಲ್ ಪಾಲುಗಾರಿಕೆ ನಂತರ ರವೀಂದ್ರ ಜಡೆಜಾ ಹಾಗೂ ವಾಷಿಂಗ್ಟನ್ ಸುಂದರ್ ಪಾಲುಗಾರಿಕೆ ಭಾರತ ತಂಡವನ್ನು ಸೋಲಿನಿಂದ ಪಾರು ಮಾಡಿ ಸುಲಭವಾಗಿ ಡ್ರಾ ಸಾಧಿಸುವಂತೆ ಮಾಡಿತು.
ಸ್ಕೋರ್ ವಿವರ
ಭಾರತ ಮೊದಲ ಇನ್ನಿಂಗ್ಸ್ 358
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 669
ಭಾರತ ದ್ವಿತೀಯ ಇನ್ನಿಂಗ್ಸ್ 4 ವಿಕೆಟ್ ಗೆ 425
ವಾಷಿಂಗ್ಟನ್ ಸುಂದರ ಅಜೇಯ 101 ( 206 ಎಸೆತ, 9 ಬೌಂಡರಿ, 1 ಸಿಕ್ಸರ್), ರವೀಂದ್ರ ಜಡೆಜಾ 107 ( 185 ಎಸೆತ, 13 ಬೌಂಡರಿ, 1 ಸಿಕ್ಸರ್)
ಕ್ರಿಸ್ ವೋಕ್ಸ್ 67 ಕ್ಕೆ 2)
ಪಂದ್ಯದ ಫಲಿತಾಂಶ: ಪಂದ್ಯ ಡ್ರಾ, ಸರಣಿಯಲ್ಲಿ ಇಂಗ್ಲೆಂಡ್ ಗೆ 2-1 ರ ಮುನ್ನಡೆ
ಪಂದ್ಯ ಶ್ರೇಷ್ಠ: ಬೆನ್ ಸ್ಟೋಕ್ಸ್




