Ad imageAd image

ಪತ್ರಿಕಾ ರಂಗ ಸತ್ಯದ ಹೆಬ್ಬಾಗಿಲಾಗಲಿ – ಸುನೀಲ್ ಕಬ್ಬೂರ

Bharath Vaibhav
ಪತ್ರಿಕಾ ರಂಗ ಸತ್ಯದ ಹೆಬ್ಬಾಗಿಲಾಗಲಿ – ಸುನೀಲ್ ಕಬ್ಬೂರ
WhatsApp Group Join Now
Telegram Group Join Now

ಹಾರೂಗೇರಿ: ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ವಿಜಯ ಕರ್ನಾಟಕ ವರದಿಗಾರ ಸುನೀಲ್ ಕಬ್ಬೂರ, ಪತ್ರಿಕಾ ರಂಗ ನ್ಯಾಯ, ಪ್ರಾಮಾಣಿಕತೆ, ವಾಸ್ತವ, ವರದಿಗಳೆಂಬ ನಾಲ್ಕು ಕಂಬಗಳಿಂದ ಕೂಡಿದ ಅರಮನೆ . ಈ ಅರಮನೆಯ ಹೆಬ್ಬಾಗಿಲು ಸತ್ಯವೇ ಆಗಿ ರಬೇಕು ಆಗ ಮಾತ್ರ ಸ್ವಾಸ್ಥ್ಯ ಸಮಾಜದ ಕನಸು ನನಸಾಗುತ್ತದೆ ಎಂದು ಅನೇಕ ನಿದರ್ಶನಗಳೊಂದಿಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಕೆಲವೊಮ್ಮೆ ಪತ್ರಕರ್ತರು ಹಣ ಮತ್ತು ಖ್ಯಾತಿಗಾಗಿ ತಮ್ಮ ನೈತಿಕತೆಯನ್ನು ತ್ಯಜಿಸುತ್ತಾರೆ. ಒಳ್ಳೆಯ ಪತ್ರಕರ್ತ ಯಾವಾಗಲೂ ನೈತಿಕವಾಗಿ ವರ್ತಿಸಬೇಕು ಮತ್ತು ಕಥೆಯ ಹಿಂದಿನ ರಹಸ್ಯಗಳನ್ನು ಬಹಿರಂಗಪಡಿಸಲು ಸಹಾಯ ಮಾಡಿದರೂ ಸಹ ಕಾನೂನುಬಾಹಿರ ಕ್ರಮಗಳನ್ನು ಎಂದಿಗೂ ಅನುಸರಿಸಬಾರದು. ಹೊಸ ಕೃತಿಯನ್ನು ಬರೆಯುವಾಗ ನಿಖರತೆ ಮತ್ತು ಪ್ರಾಮಾಣಿಕತೆ ಹೆಚ್ಚು ಮುಖ್ಯವಾಗಿರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಧ್ಯಕ್ಷಿಯಪರ ಮಾತನಾಡಿದ ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾದ ಡಾ. ಎಲ್ ಬಿ ಬನಶಂಕರಿಯವರು,ಬರಹಗಾರರು ತನ್ನ ಜೀವಿತಾವಧಿಯಲ್ಲಿ ಸತ್ಯದ ,ಪ್ರಾಮಾಣಿಕತೆಯ ಬದುಕಿನೊಂದಿಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತನ್ನನ್ನು ತಾನು ಸಾಮಾಜಿಕವಾಗಿ, ಆಡಳಿತಾತ್ಮಕವಾಗಿ, ವ್ಯವಹಾರಿಕವಾಗಿ, ಸಾಂಸ್ಕೃತಿಕವಾಗಿ ತೊಡಗಿಸಿಕೊಂಡು ಬಾಳುವುದಕ್ಕೆ ಪ್ರೇರಣೆಯಾಗಬೇಕು ಎಂದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ.ಪ್ರವೀಣ ಅಂಗಡಿಯವರು ಪರಿಚಯದೊಂದಿಗೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ವಾಣಿಜ್ಯಶಾಸ್ತ್ರದ ಮುಖ್ಯಸ್ಥರಾದ ಡಾ. ಸುಭಾಷ ಕಚಕಾರಟ್ಟಿ, ಉಪನ್ಯಾಸಕರಾದ ಚಂದ್ರಕಾಂತ ಕೊಳ್ಳೆನ್ನವರ, ಮಂಜುನಾಥ ಪಾಟೀಲ,ಯಲ್ಲಪ್ಪ ಮುಗಳಿಹಾಳ, ಆನಂದ ಚಾಣಗಿ,ಗಿರೀಶ ಚವ್ಹಾಣ ಡಾ. ರೇಖಾ, ಲಕ್ಷ್ಮಿ ಬೆಂಡೆ,ಪ್ರಮೋದ ಮುಂಜೆ,ರಾವಸಾಬ ಕಟಾವಿ, ಗೌಡಪ್ಪ ಅಳ್ಳಿಮಟ್ಟಿ, ಬೋಧಕ -ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article
error: Content is protected !!