ಯುಎಸ್ : ಒಂಬತ್ತು ತಿಂಗಳ ಸುಧೀರ್ಘ ಪಯಣದ ಬಳಿಕ ಅಂತರಿಕ್ಷ ಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ ಮೋರ್ ಕೊನೆಗೂ ಭೂಮಿಗೆ ಸುರಕ್ಷಿತವಾಗಿ ಮರಳಿದ್ದಾರೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇಬ್ಬರನ್ನೂ ನಾಸಾ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು.ಕೇವಲ ಎಂಟು ದಿನಗಳಲ್ಲಿ ಭೂಮಿಗೆ ಮರಳಬೇಕಿದ್ದ ಈ ಗಗನ ಯಾತ್ರಿಗಳ ಜೋಡಿ ತಾಂತ್ರಿಕ ದೋಷದಿಂದಾಗಿ ಅಂತರಿಕ್ಷದಲ್ಲೇ ಸಿಲುಕಿಕೊಂಡಿತ್ತು.
ಅತೀವ ಕಡಿಮೆ ಅನ್ನಾಹಾರ, ನೀರು ಹಾಗೂ ಉಸಿರಾಡುವ ಗಾಳಿಯಲ್ಲಿ ಬದುಕಿದ್ದ ಸುನಿತಾ ಮತ್ತು ಬುಚ್ ಒಂದು ಹಂತದಲ್ಲಿ ಭೂಮಿಗೆ ಮರಳುವ ವಿಶ್ವಾಸವನ್ನೇ ಕಳೆದುಕೊಂಡಿದ್ದರು. ಈಗ ಇಬ್ಬರೂ ಸುರಕ್ಷಿತವಾಗಿ ಮರಳಿರುವುದರಿಂದ ಇಡೀ ವಿಶ್ವಾದ್ಯಂತ ಸಂಭ್ರಮ ವ್ಯಕ್ತವಾಗಿದೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪುತ್ತಿದ್ದಂತೆಯೇ ಸುನಿತಾ ಆನಂದಭಾಷ್ಪ ಸುರಿಸುತ್ತಾ ಸಂತಸ ಪಟ್ಟಿದ್ದಾರೆ. ಇವರಿಬ್ಬರೂ ಕೃಶ ದೇಹಿಗಳಾಗಿರುವುದು ಹಾಗೂ ಬಾಹ್ಯಾಕಾಶದಲ್ಲೇ ರೋಗಕ್ಕೊಳಗಾಗಿ ಸಾವನ್ನಪ್ಪುವ ಆತಂಕದಲ್ಲಿ ನಾಸಾ ಹಗಲಿರುಳು ಇವರನ್ನು ರಕ್ಷಿಸಲು ಶ್ರಮಿಸುತ್ತಿತ್ತು.
ನಮ್ಮ ಗೆಳೆಯರನ್ನು ಮತ್ತೆ ಕಾಣಲು ಸಂತಸವಾಗುತ್ತಿದೆ. ಇದೊಂದು ಅದ್ಭುತವಾದ ದಿನ ಎಂದು ಸುನಿತಾ ಪ್ರತಿಕ್ರಿಯೆ ನೀಡಿದ್ದಾರೆ.