ದುಬೈ: ಸೈಪ್ ಹಸನ್ ಹಾಗೂ ತೋವ್ಹಿದ್ ಹ್ರಿದೊಯ್ ಅವರ ಆಕರ್ಷಕ ಅರ್ಧ ಶತಕಗಳ ನೆರವಿನಿಂದ ಬಾಂಗ್ಲಾದೇಶ ಕ್ರಿಕೆಟ್ ತಂಡವು ಇಲ್ಲಿ ನಡೆದ ಏಶಿಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಸೂಪರ್-4 ರ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 4 ವಿಕೆಟ್ ಗಳಿಂದ ಮಣಿಸಿತು.
ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ನಿಗದಿತ 20 ಓವರುಗಳಲ್ಲಿ 7 ವಿಕೆಟ್ ಗೆ 168 ರನ್ ಗಳಿಸಿತು. ಪ್ರತಿಯಾಗಿ ಆಡಿದ ಬಾಂಗ್ಲಾದೇಶ ತಂಡ 19.5 ಓವರುಗಳಲ್ಲಿ 6 ವಿಕೆಟ್ ಗೆ 169 ರನ್ ಗಳಿಸಿ ಜಯ ದಾಖಲಿಸಿತು.
ಸ್ಕೋರ್ ವಿವರ
ಶ್ರೀಲಂಕಾ 20 ಓವರುಗಳಲ್ಲಿ 7 ವಿಕೆಟ್ ಗೆ 168
ಶಂಕಾ 64 ( 37 ಎಸೆತ, 3 ಬೌಂಡರಿ, 6 ಸಿಕ್ಸರ್), ಕುಶಾಲ್ ಮೆಂಡಿಸ್ 34 ( 25 ಎಸೆತ, 1 ಬೌಂಡರಿ, 3 ಸಿಕ್ಸರ್)
ಮುಸ್ತಾಪಿಜುರ್ 20 ಕ್ಕೆ 3
ಬಾಂಗ್ಲಾದೇಶ 19.5 ಓವರುಗಳಲ್ಲಿ 6 ವಿಕೆಟ್ ಗೆ 169
ಸೈಪ್ ಹಸನ್ 61 ( 45 ಎಸೆತ, 2 ಬೌಂಡರಿ, 4 ಸಿಕ್ಸರ್), ತೋವ್ಹಿದ್ ಹ್ರಿದೊಯ್ 58 ( 37 ಎಸೆತ, 4 ಬೌಂಡರಿ, 2 ಸಿಕ್ಸರ್)
ದಶುನ್ ಶಂಕಾ 21 ಕ್ಕೆ 2
————————————————–ಪಂದ್ಯ ಶ್ರೇಷ್ಠ: ಸೈಪ್ ಹಸನ್




