ಮುದಗಲ್ಲ:-ಪರಿಶಿಷ್ಟ ಜಾತಿಯ ಮಿಸಲಾತಿ ಯಲ್ಲಿ ಮಾದಿಗ ಜನಾಂಗಕೆ ಒಳ ಮಿಸಲಾತಿ ಕಲ್ಪಿಸುವುದರಿಂದ ಸಂವಿಧಾನ ಉಲ್ಲಂಘನೆ ಆಗುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಸಮ್ಮತಿಸಿರುವುದು ನಿಜಕ್ಕೂ ಸ್ವಾಗತಾರ್ಹ ಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕರಾದ ಶರಣಪ್ಪ ಕಟ್ಟಿಮನಿ ಹಾಗೂದಲಿತ ಸಂಘರ್ಷ ಸಮಿತಿ ಮುದಗಲ್ಲ ಘಟಕ ಸಂಚಾಲಕರಾದ ಬಸವರಾಜ ಬಂಕದಮನಿ ತಿಳಿಸಿದರು.
ಇಡೀ ದೇಶದಲ್ಲಿ ಸಂವಿಧಾನ ರಕ್ಷಣೆಯ ಹೊಣೆ ಹೊತ್ತ ಸುಪ್ರೀಂ ಕೋರ್ಟ್ ಅದರಲ್ಲೂ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಮಹತ್ವದ ತೀರ್ಪು ನೀಡಿದ್ದಾರೆಂದರು.ದೇಶದ ಸಂಪತ್ತು ಸಮಾನವಾಗಿ ಹಂಚಿಕೆಯಾಗಬೇಕು, ದಮನಿತರ, ಹಿಂದುಳಿದವರು ಸಮಾಜದ ಮುನ್ಮೆಲೆಗೆ ಬರಬೇಕು ಎಂಬುವುದು ಸಂವಿಧಾನದ ಆಶೆಯ ಅದನ್ನು ಎತ್ತಿಹಿಡಿದಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ವರದಿ:- ಮಂಜುನಾಥ ಕುಂಬಾರ