Ad imageAd image

FIR ಇಲ್ಲದಿದ್ದರೂ GST, ಕಸ್ಟಮ್ಸ್ ಸಂಬಂಧಿತ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಪಡೆಯಬಹುದು: ಸುಪ್ರೀಂ ಕೋರ್ಟ್

Bharath Vaibhav
FIR ಇಲ್ಲದಿದ್ದರೂ GST, ಕಸ್ಟಮ್ಸ್ ಸಂಬಂಧಿತ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಪಡೆಯಬಹುದು: ಸುಪ್ರೀಂ ಕೋರ್ಟ್
WhatsApp Group Join Now
Telegram Group Join Now

ನವದೆಹಲಿ: ನಿರೀಕ್ಷಣಾ ಜಾಮೀನು ನಿಬಂಧನೆ ಸರಕು ಮತ್ತು ಸೇವೆಗಳ ಕಾಯ್ದೆ ಮತ್ತು ಕಸ್ಮಮ್ಸ್ ಕಾನೂನಿಗೆ ಅನ್ವಯಿಸುತ್ತದೆ ಮತ್ತು ಎಫ್‌ಐಆರ್ ಜಾರಿಯಲ್ಲಿಲ್ಲದಿದ್ದರೂ ವ್ಯಕ್ತಿಗಳು ಬಂಧನ ಪೂರ್ವ ಜಾಮೀನಿಗಾಗಿ ನ್ಯಾಯಾಲಯಗಳನ್ನು ಸಂಪರ್ಕಿಸಬಹುದು ಎಂದು ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ.

ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ್ ಮತ್ತು ಬೇಲಾ ಎಂ.ತ್ರಿವೇದಿ ಅವರನ್ನೊಳಗೊಂಡ ನ್ಯಾಯಪೀಠವು ಕಳೆದ ವರ್ಷ ಮೇ 16 ರಂದು ಕಸ್ಟಮ್ಸ್ ಕಾಯ್ದೆ, ಜಿಎಸಿ ಕಾಯ್ದೆಯಲ್ಲಿನ ದಂಡದ ನಿಬಂಧನೆಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಮೇಲಿನ ತೀರ್ಪನ್ನು ಕಾಯ್ದಿರಿಸಿತ್ತು.

ನಿರೀಕ್ಷಣಾ ಜಾಮೀನಿನಂತಹ ವಿಷಯಗಳ ಬಗ್ಗೆ ಸಿಆರ್ಪಿಸಿ ಮತ್ತು ನಂತರದ ಕಾನೂನು, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್ಎಸ್‌ಎಸ್) ನಿಬಂಧನೆಗಳು ಕಸ್ಟಮ್ಸ್ ಮತ್ತು ಜಿಎಸ್ಟಿ ಕಾಯ್ದೆಗಳ ಅಡಿಯಲ್ಲಿ ವ್ಯಕ್ತಿಗಳಿಗೆ ಅನ್ವಯವಾಗುತ್ತವೆ ಎಂದು ತೀರ್ಪು ಪ್ರಕಟಿಸಿದ ಸಿಜೆಐ ಹೇಳಿದರು.

ಜಿಎಸ್ಟಿ ಮತ್ತು ಕಸ್ಮಮ್ಸ್ ಕಾಯ್ದೆಗಳ ಅಡಿಯಲ್ಲಿ ಸಂಭಾವ್ಯ ಬಂಧನವನ್ನು ಎದುರಿಸುತ್ತಿರುವ ವ್ಯಕ್ತಿಗಳು ಎಫ್‌ಐಆರ್ ದಾಖಲಿಸುವ ಮೊದಲೇ ನಿರೀಕ್ಷಣಾ ಜಾಮೀನು ಪಡೆಯಲು ಅರ್ಹರಾಗಿದ್ದಾರೆ ಎಂದು ಅದು ಹೇಳಿದೆ. ವಿವರವಾದ ತೀರ್ಪಿಗಾಗಿ ಕಾಯಲಾಗುತ್ತಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!