ಚಾಮರಾಜನಗರ : ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರ ಮೇಲೆ ಶೂ ಎಸೆಯಲು ಮುಂದಾದ ವ್ಯಕ್ತಿಯನ್ನು ದೇಶದಿಂದ ಗಡಿಪಾರು ಮಾಡಬೇಕು. ಇದರ ನೈತಿಕ ಹೊಣೆಯನ್ನು ಹೊತ್ತು ಮೋದಿ ನೇತೃತ್ವದ ಸರ್ಕಾರ ರಾಜೀನಾಮೆ ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿ.ರಾಜಣ್ಣ ಯರಿಯೂರು ಆಗ್ರಹಿಸಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸುಪ್ರೀಂ
ಕೋರ್ಟ್ ನ್ಯಾಯಮೂರ್ತಿಗಳ ಮೇಲೆ ತನ್ನ ಶೂ ಎಸೆಯಲು ಮುಂದಾಗಿರುವುದು ಇದು ವ್ಯಕ್ತಿಯೊಬ್ಬರ ಮೇಲೆ ನಡೆದ ದಾಳಿಯಲ್ಲ
ನ್ಯಾಯದ ಮೇಲಿನ ದಾಳಿ, ಸಂವಿಧಾನ ಮೇಲಿನ ದಾಳಿ.
ಮನುವಾದಿಗಳ ಈ ಮನಸ್ಥಿತಿಯ ಪೋಷಕರು ಯಾರೆಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಇದು ಕೇವಲ ಶೂ ದಾಳಿಯಲ್ಲ ಮನುವಾದದ ಮತಾಂದರು ನಡೆಸಿದ ಸಂವಿಧಾನದ ಮೌಲ್ಯಗಳ ಮೇಲಿನ ಭಯೋತ್ಪಾದಕ ದಾಳಿ ಇದಾಗಿದೆ,
ಸಂವಿಧಾನದ ಮೇಲೆ ಮನುವಾದಿಗಳಿಗಿರುವ ಅಸಹನೆಗೆ ಈ ದೇಶದ ಅತ್ಯುನ್ನತ ಸ್ಥಾನದಲ್ಲಿದ್ದರೂ ಶೋಷಿತರ ಶೋಷಣೆ ತಪ್ಪಿದ್ದಲ್ಲ ಎನ್ನುವುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆ.
ಸಂವಿಧಾನ ಅಪಾಯದಲ್ಲಿದೆ ಎಂಬ ನಮ್ಮ ಆತಂಕಕ್ಕೆ ಇದು ನೇರ ಪುರಾವೆ ಸಿಕ್ಕಿದೆ.
ದೇಶದ ಇತಿಹಾಸದಲ್ಲೇ ಎಂದೂ ನಡೆಯದ ಈ ಮಾದರಿಯ ಕೃತ್ಯ ಇಂದು ನಡೆದಿದೆ. ಮನುವಾದಿಗಳ
ಈ ಕಪ್ಪುಚುಕ್ಕಿಯನ್ನು, ಎಂದಿಗೂ ಅಳಿಸಲು ಸಾಧ್ಯವಿಲ್ಲ.
ಸ್ವಾತ್ರಂತ್ಯ ಸಿಕ್ಕ ನಂತರದಿಂದ ಹಿಡಿದು ಇವತ್ತೀನವರೆವಿಗೂ ಏನು ಬದಲಾವಣೆ ಆಗಿಲ್ಲ. ಈ ಮನುವಾದಿ ಸನಾತನಿ ಮತಾಂಧ ಸಂಘ ಪರಿವಾರದ ವಿಕೃತ ಮನಸ್ಥಿತಿಗಳು ಸಂವಿಧಾನದ ಪ್ರತಿಗಳನ್ನು ಸುಟ್ಟಿದರು. ಇದೇ ದೇಶದ್ರೋಹಿಗಳು ಸಂಘ ಪರಿವಾರಗಳು.
ಇವತ್ತು ಅದರ ಮುಂದುವರಿಕೆ ಭಾಗವಾಗಿ ಸವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ದಲಿತ ಸಮುದಾಯದಿಂದ ಬಂದವರು ಎಂಬ ಒಂದೇ ಕಾರಣಕ್ಕೆ ಈ ಸನಾತನಿ ಮನುವಾದಿ ಮತಾಂಧ ಭಯೋತ್ಪಾದಕ ರಾಕೇಶ್ ಕಿಶೋರ್ ಎಂಬವನು ಶೂ ಎಸೆತ ಮಾಡಿದ್ದಾನೆ. ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಡಿ.ಜಿ.ಸಾಗರ್ ಬಣದ ಜಿಲ್ಲಾ ಸಂಚಾಲಕ ಸಿ.ಎಂ.ಶಿವಣ್ಣ , ಜನಹಿತಾಶಕ್ತಿ ಹೋರಾಟ ವೇದಿಕೆ ರಾಮಸಮುದ್ರ ಸುರೇಶ್ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಡಿಎಸ್ಎಸ್ ಜಿಲ್ಲಾ ಸಂಯೋಜಕ ಬಸವರಾಜು ಕೆರೆಹಳ್ಳಿ, ಜಿಲ್ಲಾ ಸಂಘಟನಾ ಸಂಘಟಕರಾದ ನಂಜುಂಡಸ್ವಾಮಿ, ಶಿವಕುಮಾರ್, ಹಾಜರಿದ್ದರು.
ವರದಿ : ಸ್ವಾಮಿ ಬಳೇಪೇಟೆ




