ಕಾಳಗಿ : ಇಂದು ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ವೃತ್ತದಲ್ಲಿ ಇಥನಾಲ್ ಕಾರ್ಖಾನೆ ಪುನಃ ಪ್ರಾರಂಭ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ ಹಿನ್ನೆಲೆ ಪಟ್ಟಾಕಿ ಸಿಡಿಸಿ ವಿಜಯೋತ್ಸವ ಆಚರಣೆ ಮಾಡಲಾಯಿತು, ಚಿಂಚೋಳಿ ಭಾಗದ ಇಥನಾಲ್ ಕಾರ್ಖಾನೆ ಬಂದ್ ಆಗಿದ್ದರಿಂದ ರೈತರ ಕೈಗೆ ಬಂದ ತುತ್ತು ಬಾಯಿ ಬಾರದೆ ಹಾಗಾಯಿತು ಎಂದು ದುಃಖದಲ್ಲಿ ಕುಳಿತ ರೈತರ ಮುಖದಲ್ಲಿ ಮಂಧಹಾಸ ಮೂಡಿಸಿದ್ದೆ,ಸುಮಾರು 25000 ಸಾವಿರ ಎಕ್ಕರೆಗಿಂತ ಹೆಚ್ಚು ಭೂಮಿಯಲ್ಲಿ ರೈತರು ಕಬ್ಬು ಬೆಳೆದಿದ್ದು ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ಕಬ್ಬು ಬೆಳೆಗಾರ, ರೈತರ ಬದುಕು ಕಟ್ಟಿಕೊಳ್ಳಲು ಬಹುದಿನಗಳ ಬೇಡಿಕೆ ಈಡೇರಿಸುವಂತೆ ಸಿದ್ದಸಿರಿ ಇಥನಾಲ್ ಕಾರ್ಖಾನೆಯನ್ನು ಪುನಃ ಪ್ರಾರಂಭ ಮಾಡುವಂತೆ ಸುಮಾರು ಎರಡು ತಿಂಗಳಿಂದ ನಿರಂತರ ಧರಣಿ ಸತ್ಯಾಗ್ರಹ ಕೂಡ ಹಮ್ಮಿಕೊಳ್ಳಲಾಗಿತ್ತು, ಇದ್ದಕ್ಕೆ ರೈತರು, ಹಾಗೂ ದಲಿತ ಸೇನೆ,ಹಸಿರು ಸೇನೆ, ಹಿಂದೂ ಜಾಗೃತಿ ಸೇನೆ, ಸಾಥ್ ನೀಡಿದರು ಎಂದು ಗೌರಿ ಶಂಕರ ಅವರು ಮಾತನಾಡಿ ಹರ್ಷ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ : ನಾಗರಾಜ ಬೇವಿನಕರ ದಲಿತ ಸೇನೆ ತಾಲೂಕಾಧ್ಯಕ್ಷ, ಗ್ರಾಮ ಪಂಚಾಯತ್ ಸದಸ್ಯ ಸಿದ್ದು ಬುಬಲಿ, ಸಂತೋಷ ಮಾಳಗಿ, ಜಗ್ಗು ಮಾಘಿ, ಶಂಕರ ಚೋಕ ಹಿಂದೂ ಜಾಗೃತಿ ಸೇನೆ ತಾಲೂಕ ಅಧ್ಯಕ್ಷ, ವೀರಣ ಗಂಗಣ್ಣ, ಸಿದ್ದು ಗಾರಂಪಳ್ಳಿ, ಚೆನ್ನಪ್ಪ ಹೂಗಾರ್, ರಮೇಶ ಸಂಗು ತಂಡೂರ ಇದ್ದರು
ವರದಿ : ಹಣಮಂತ ಕುಡಹಳ್ಳಿ