ಕ್ರೀಡಾ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ
ರಾಮದುರ್ಗ:ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ರಾಮದುರ್ಗ, ಸಮೂಹ ಸಂಪನ್ಮೂಲ ಕೇಂದ್ರ ಸುರೇಬಾನ ವಲಯ ಮಟ್ಟದ ಕ್ರೀಡಾಕೂಟವನ್ನು ಅವರಾದಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ 2025-26ನೇ ಸಾಲಿನ ಕ್ರೀಡಾಕೂಟ ಕಾರ್ಯಕ್ರಮವು ಶ್ರೀ ಫಲಾಹಾರೇಶ್ವರ ಮಠದಲ್ಲಿ ಪರಮ ಪೂಜ್ಯ ಶ್ರೀ ಮ.ನಿ.ಪ್ರ. ಸ್ವ ಶಿವಮೂರ್ತಿ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಕ್ರೀಡಾ ಜ್ಯೋತಿ ಬೆಳಗಿಸುವದರ ಮೂಲಕ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು ಮಹಾದೇವಿ ಬಾಡಗಾರ ವಹಿಸಿಕೊಂಡಿದ್ದರು. ಶಿಕ್ಷಣ ಸಂಯೋಜಕರಾದ ಎ ಆರ್ ಜೋಶಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಿ ಆರ್ ಪಿ, ಆರ್ ಪಿ ಬೆಟಗೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲ ತಯಾರಿ ಮಾಡಿಕೊಳ್ಳುವ ಮೂಲಕ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಈ ಕ್ರೀಡಾಕೂಟದಲ್ಲಿ ವಲಯ ಮಟ್ಟದಲ್ಲಿ 12 ಶಾಲೆಗಳು ಭಾಗವಹಿಸಿರುತ್ತವೆ, ವಿದ್ಯಾರ್ಥಿಗಳು ಎಲ್ಲ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಶಾಲೆಗೆ ಕೀರ್ತಿಯನ್ನು ತರಲು ಶುಭ ಹಾರೈಸಿದರು ಇನ್ನು ಮೈದಾನವನ್ನು ಉತ್ತಮವಾಗಿಡಲು ಗ್ರಾಮದ ಎಲ್ಲ ಗುರು ಹಿರಿಯರು ಸಹಕರಿಸಿರುವದಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಶಿಕ್ಷಣ ಸಂಯೋಜಕರಾದ ಎ ಆರ್ ಜೋಶಿ ಅವರು ಮಾತನಾಡಿ ಕ್ರೀಡೆ ಅನ್ನುವುದು ಹಲವಾರು ವರ್ಷಗಳಿಂದ ಬಂದಿದ್ದಾಗಿದೆ, ಪ್ರತಿಭೆ ಅನ್ನುವುದು ಗ್ರಾಮೀಣ ಪ್ರದೇಶದಲ್ಲಿ ಇರುತ್ತದೆ,ಸದೃಢವಾದ ದೇಹ ನಿರ್ಮಾಣ ಮಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇರುವಂತದ್ದು, ಪ್ರತಿ ವರ್ಷ ಸುರೇಬಾನ ವಲಯ ಮಟ್ಟದ ಕ್ರೀಡಾ ಪಟುಗಳು ರಾಜ್ಯ ಮಟ್ಟಕ್ಕೆ ಹೋಗುವುದು ತುಂಬಾ ಹೆಮ್ಮೆಯ ವಿಷಯವಾಗಿದೆ, ಎಲ್ಲ ವಿದ್ಯಾರ್ಥಿಗಳು ಎಲ್ಲ ಕ್ರೀಡೆಯಲ್ಲಿ ಭಾಗವಹಿಸಲು ಕರೆ ನೀಡಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಬಿ ಎಸ್ ಗುಡದನ್ನವರ ಅವರು ಮಾತನಾಡಿ ಶಿಕ್ಷಣ ಅನ್ನುವುದು ಕೇವಲ ಮಾನಸಿಕವಾದದ್ದು ಅಲ್ಲ ಅದು ದೈಹಿಕವಾದದ್ದಾಗಿದೆ, ನಾವು ಸಹ ಕ್ರೀಡಾಕೂಟದಲ್ಲಿ ಭಾಗವಹಿಸುವುದು ಅಂದರೆ ಬಹಳ ಖುಷಿ ಎನಿಸುತ್ತದೆ. ಶಿಕ್ಷಣದ ಜೊತೆಗೆ ಕ್ರೀಡೆಗೂ ಮಹತ್ವ ಕೊಡುವುದು ತುಂಬಾ ಅವಶ್ಯವಾಗಿದೆ. ಮಕ್ಕಳ ಅಭಿವೃದ್ಧಿಗೆ ಕಾರ್ಯ ನಿರ್ವಹಿಸಲು ಸದಾ ಸಿದ್ದರಿರುತ್ತೇವೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಪೂಜ್ಯ ಶ್ರೀಗಳು ಆಶೀರ್ವಚನ ನುಡಿಗಳನ್ನಾಡಿ ಕ್ರೀಡೆ ಮನುಷ್ಯನಿಗೆ ಅತೀ ಅವಶ್ಯಕವಾಗಿದೆ ಶಾಲೆಯಲ್ಲಿ ಜ್ಞಾನ ಪ್ರತಿಭೆ ಅನ್ನುವುದು ನಾಲ್ಕು ಗೋಡೆಗಳ ಮದ್ಯೆ ಅಷ್ಟೇ ಅಲ್ಲ, ಕ್ರೀಡೆ ಅನ್ನುವುದು ಒಂದು ಪ್ರತಿಭೆ,ಸೋಲು ಗೆಲುವು ಅನ್ನುವುದು ಮುಖ್ಯವಲ್ಲ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ನುಡಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬಸವರಾಜ ಛಬ್ಬಿ, ರಾಜಶೇಖರ ಹಿರೇಮಠ, ಎಲ್ ಆರ್ ಕನಕಪ್ಪನವರ, ಶಿವಪ್ಪ ಮೇಟಿ, ಎಂ ಎಸ್ ನಿಜಗುಲಿ, ಸುಧಾ ಬಡಿಗೇರ, ನಾಗರಾಜ ಚಿಕ್ಕೊಪ್ಪ, ವಿಜಯಲಕ್ಷ್ಮೀ ದಾಸರ, ಮಂಜುಳಾ ರೋಣದ, ಎಂ ಎಸ್ ಮೇಟಿ, ಫಕೀರಪ್ಪ ಮೇಟಿ, ಸಂಗಪ್ಪ ಮುದಕನ್ನವರ, ಸಂಗಪ್ಪ ತೋಟರ, ಜಯಶ್ರೀ ಮಾದರ, ಆರ್ ವಾಯ್ ನದಾಫ್, ಕೆ ಎನ್ ಯಡ್ರಾವಿ, ಎಸ್ ವಿ ಪಾಟೀಲ, ಸಿ ಕೆ ಬಡಿಗೇರ, ಅಡಿವೆಪ್ಪ ಮೋಟೆ, ಎಸ್ ಆರ್ ಗುರುಬಸಣ್ಣವರ, ಕುಮಾರ ಮಾದರ,ಬಾಳಪ್ಪ ರೋಣದ ಸೇರಿದಂತೆ ಎಲ್ಲ ಪ್ರಧಾನ ಗುರುಗಳು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಿಕ್ಷಕರಾದ ರೇಖಾ ಪಿಟಗಿ ನಿರೂಪಿಸಿದರು , ವಿ ಡಿ ಯಲಿಗೋಡ ಸ್ವಾಗತಿಸಿದರು, ಸಿ ಕೆ ಬಡಿಗೇರ ವಂದಿಸಿದರು.
ವರದಿ: ಕುಮಾರ ಎಂ




