Ad imageAd image

ಸುರೇಬಾನ ಪೂರ್ವ ವಲಯದ ಕ್ರೀಡಾಕೂಟ ಉದ್ಘಾಟನಾ ಸಮಾರಂಭ

Bharath Vaibhav
ಸುರೇಬಾನ ಪೂರ್ವ ವಲಯದ ಕ್ರೀಡಾಕೂಟ ಉದ್ಘಾಟನಾ ಸಮಾರಂಭ
WhatsApp Group Join Now
Telegram Group Join Now

ರಾಮದುರ್ಗ:-ತಾಲೂಕಿನ ಸಮೂಹ ಸಂಪನ್ಮೂಲ ಕೇಂದ್ರ ಸುರೇಬಾನ-ಮನಿಹಾಳ ಪೂರ್ವ ವಲಯದ ಕ್ರೀಡಾಕೂಟ 2024-25 ಉದ್ಘಾಟನಾ ಸಮಾರಂಭವು ತಾಲೂಕಿನ ಸಂಗಳ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಜರುಗಿತು ಸಮಾರಂಭದ ದಿವ್ಯ ಸಾನಿಧ್ಯ ಶ್ರೀ ಪರಮ ಪೂಜ್ಯ ಸಚ್ಚಿದಾನಂದ ಮಹಾಸ್ವಾಮಿಗಳು ಶ್ರೀ ಶಿವಾನಂದ ಮಠ ಬೆಳ್ಳೇರಿ ಶ್ರೀಗಳು ವಹಿಸಿದ್ದರು.

ಕಾರ್ಯಕ್ರಮವನ್ನು ಸಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಾಂತವ್ವ ಭಜಂತ್ರಿ ಅವರು ಉದ್ಘಾಟಿಸಿದರು, ತಾ.ಪಂ.ಮಾಜಿ ಸದಸ್ಯರಾದ ಕಾಶಮ್ಮ ಬಳಗನೂರಮಠ ಇವರು ಕ್ರೀಡಾ ಧ್ವಜಾರೋಹಣವನ್ನು ನೆರವೇರಿಸಿದರು, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಆರ್ ಎಸ್ ಬೇವಿನಕಟ್ಟಿ ಇವರು ಕ್ರೀಡಾಜ್ಯೋತಿ ಬೆಳಗಿಸುವದರೊಂದಿಗೆ ಕ್ರೀಡಾಕೂಟ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್ ವಿ ಪಾಟೀಲ ಹಾಗೂ ಕೆ ವಾಯ್ ಪಾಟೀಲ ಕ್ರೀಡೆಗಳನ್ನು ಸಂಕೇತಿಕವಾಗಿ ಉದ್ಘಾಟಿಸಿದರು.

ಸಂಪನ್ಮೂಲ ವ್ಯಕ್ತಿಗಳು ಆರ್ ಪಿ ಬೆಟಗೇರಿ ಅವರು ಪ್ರಸ್ತಾವಿಕವಾಗಿ ಮಾತನಾಡಿದರು,ವಿ ಡಿ ಯಲಿಗೋಡ ಸಂಪನ್ಮೂಲ ವ್ಯಕ್ತಿಗಳು ಸ್ವಾಗತಿಸಿದರು,ಡಿ ಎಸ್ ಬಾಡಿಯವರ ಗುರುಮಾತೆಯರು ಪುಷ್ಪಾರ್ಚನೆ ಮಾಡಿದರು, ಸಿ ಬಿ ಸುಂಕದ ಗುರುಮಾತೆಯರು ಕಾರ್ಯಕ್ರಮ ನಿರೂಪಿಸಿದರು ಈ ಸಂದರ್ಭದಲ್ಲಿ ನಾಗರಾಜ ಪಿಇ ಕಾರ್ಯನಿರ್ವಾಹಕ ಅಭಿಯಂತರರು ಸುರೇಬಾನ ಹಾಗೂ ತಾ. ಪಂ.ಮಾಜಿ ಸದಸ್ಯರು ಕಾಶಮ್ಮ ಬಳಗಾನೂರಮಠ ಇವರನ್ನು ಸತ್ಕರಿಸಲಾಯಿತು.

ದೈಹಿಕ ಶಿಕ್ಷಕರಾದ ಅನಿತಾ ಗಡದೆ ಕ್ರೀಡಾ ಪ್ರತಿಜ್ಞಾವಿಧಿಯನ್ನು ಬೋಧಿಸಿದರು, ಗ್ರಾ.ಪಂ. ಹಾಗೂ ಎಸ್ ಡಿ ಎಮ್ ಸಿ ಸರ್ವ ಸದಸ್ಯರು, ಎಲ್ಲ ಮುಖ್ಯ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರು ಸಂಗಳ ಗ್ರಾಮದ ಗುರು-ಹಿರಿಯರು ಹಾಗೂ ಗ್ರಾಮದ ಯುವಕ ಮಂಡಳಗಳ ಸರ್ವ ಸದಸ್ಯರು ಉಪಸ್ಥಿತರಿದ್ದರು,ಎಸ್ ಎಸ್ ತೊರಗಲ್ಮಠ ಪ್ರ.ಗು ಕಾರ್ಯಕ್ರಮ ವಂದಿಸಿದರು.

ವರದಿ: ಕುಮಾರ ಎಮ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!