ರಾಮದುರ್ಗ :-ತಾಲೂಕಿನ ಸಮೂಹ ಸಂಪನ್ಮೂಲ ಕೇಂದ್ರ ಸುರೇಬಾನ-ಮನಿಹಾಳ ಪಶ್ಚಿಮ ವಲಯದ ,ಕ್ರೀಡಾಕೂಟ 2024-25 ಉದ್ಘಾಟನಾ ಸಮಾರಂಭವು ತಾಲೂಕಿನ ಸುರೇಬಾನ ಗ್ರಾಮದ ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಜರುಗಿತು.ಸಮಾರಂಭದ ಸಾನಿಧ್ಯ ಶ್ರೀ ಕುಮಾರ ಹಿರೇಮಠ ಪೂಜ್ಯರೂ ಸಾನಿಧ್ಯ ವಹಿಸಿದ್ದರು.ಕಾರ್ಯಕ್ರಮವನ್ನು ಕ.ರಾ.ಪ್ರಾ.ದೈ.ಶಿ ಸಂಘದ ಅಧ್ಯಕ್ಷರಾದ ಪಿ ಡಿ ಕಾಲವಾಡ ಅವರು ಉದ್ಘಾಟನೆ ಮಾಡಿದರು. ಸುರೇಬಾನ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರತ್ನಾ ಜಡಿ ಇವರು ಕ್ರೀಡಾ ಧ್ವಜಾರೋಹಣ ನೆರವೇರಿಸಿದರು.
ದೈ.ಶಿ ಸಂಘದ ಅಧ್ಯಕ್ಷರಾದ ಆರ್ ವಾಯ್ ನಧಾಪ ಇವರು ಕ್ರೀಡಾಜ್ಯೋತಿ ಬೆಳಗಿಸುವುದರೊಂದಿಗೆ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಅಶ್ರುಪ್ ಬಂಧಗಿ ಅವರು ಮಾತನಾಡಿ ನಿರ್ಣಾಯಕರ ನಿರ್ಣಯಕ್ಕೆ ಗೌರವ ಕೊಡಬೇಕೆಂದು ಕ್ರೀಡಾಪಟುಗಳಿಗೆ ತಿಳಿಸಿದರು.ಇದೇ ವೇಳೆ ಕ್ರೀಡಾಕೂಟಕ್ಕೆ ಸಹಾಯ ಮಾಡಿದ ದಾನಿಗಳನ್ನು ಸತ್ಕರಿಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾದ ಆರ್ ಪಿ ಬೆಟಗೇರಿ ಅವರು ಕ್ರೀಡಾಕೂಟದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ವಿಠ್ಠಲ ಯಲಿಗೋಡ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಸ್ವಾಗತಿಸಿದರು. ಎಂ ಎಸ್ ಮೇಟಿ ಪ್ರ.ಗುರುಗಳು ಕ್ರೀಡಾ ಪ್ರತಿಜ್ಞಾವಿಧಿ ಭೋದಿಸಿದರು. ಕಾರ್ಯಕ್ರಮದ ಸಾನಿಧ್ಯ ವಹಿಸಿದ ಶ್ರೀ ಕುಮಾರ ಹಿರೇಮಠ ಸ್ವಾಮಿಗಳು ನುಡಿಗಳನ್ನಾಡಿ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಿ ಶಾಲೆಗಳ ಅಭಿವೃದ್ಧಿಗೆ ಎಲ್ಲರೂ ಶ್ರಮಿಸುವಂತೆ ಶ್ರೀಗಳು ಆಶೀರ್ವಚನ ನೀಡಿದರು. ಶಿಕ್ಷಕರಾದ ಶಂಕರ ಕೊಣ್ಣೂರ ಕಾರ್ಯಕ್ರಮ ನಿರೂಪಿಸಿದರು.ಎಂ ಎಸ್ ಮೇಟಿ. ಪ್ರ.ಗುರುಗಳು ವಂದಿಸಿದರು.
ವರದಿ: ಕುಮಾರ ಎಮ್