ರಾಮದುರ್ಗ:ತಾಲೂಕಿನ ಸಂಗಳ ಸರಕಾರಿ ಪ್ರೌಢ ಶಾಲಾ ಆಟದ ಮೈದಾನದಲ್ಲಿ ಸುರೇಬಾನ ಕ್ಲಸ್ಟರ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟವು ಶ್ರೀ ಸದ್ಗುರು ಚಿದ್ರೂಪಾನಂದ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಕ್ರೀಡಾ ಜ್ಯೋತಿ ಬೆಳಗಿಸುವ ಮೂಲಕ ಸಮಾರಂಭ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾದ್ಯಾಯರಾದ ಬಿ ಎಚ್ ತಿಮ್ಮನಗೌಡರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಾಂತವ್ವ ಭಜಂತ್ರಿ ಅವರು ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿದರು.ಈ ಸಂದರ್ಭದಲ್ಲಿ ಸಿ ಆರ್ ಪಿ, ವಿ ಡಿ ಯಲಗೋಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಮನಿಹಾಳ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿ ರವೀಂದ್ರ ಬೆಟಗೇರಿ ಅವರು ಮಾತನಾಡಿ ಕ್ರೀಡೆಗಳಿಗಾಗಿ ಉತ್ತಮ ಮೈದಾನ ತಯಾರಿಸಿದ ಗ್ರಾ ಪಂ ಅಧ್ಯಕ್ಷರು ಹಾಗೂ ಸರ್ವಸದಸ್ಯರು, ಎಸ್ ಡಿ ಎಂ ಸಿ ಅಧ್ಯಕ್ಷರು, ಸರ್ವಸದಸ್ಯರು, ಊರಿನ ಹಿರಿಯರ ಕಾರ್ಯ ಅಭಿನಂದನೀಯವಾದುದು ಎಂದರು.

ಕಾರ್ಯಕ್ರಮದಲ್ಲಿ ದೇಣಿಗೆ ನೀಡಿದ ಎಲ್ಲ ದಾನಿಗಳಿಗೆ ಇಲಾಖೆಯ ಪರವಾಗಿ ಧನ್ಯವಾದ ಸಲ್ಲಿಸಿ ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲ ಸ್ಪರ್ದಾಳುಗಳಿಗೆ ಶುಭವಾಗಲಿ ಮತ್ತು ಎಲ್ಲರಿಗೂ ಒಳಿತಾಗಲಿ ಎಂದರು.ದೇಣಿಗೆ ನೀಡಿದ ಮಹನೀಯರನ್ನು ಗೌರವಿಸಲಾಯಿತು.

ಸಮಾರಂಭದ ದಿವ್ಯಸಾನಿಧ್ಯ ವಹಿಸಿದ ಶ್ರೀಗಳು ಆಶೀರ್ವಚನ ನೀಡಿ ಮಕ್ಕಳು ಆಟದ ನಿಯಮಗಳಿಗೆ ಬದ್ದರಾಗಿ ಆಟಗಳನ್ನು ಆಡಿ ಕ್ರಿಡಾಕೂಟ ಯಶಸ್ವಿಗೊಳಿಸಬೇಕು ಎಂದು ನುಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿಎಸ್ ಎಲ್ ಗರಡಿಮನಿ, ಎಸ್ ಟಿ ಹಳ್ಳಿಕೇರಿ, ಎಂ ಎಸ್ ಮೇಟಿ, ತಂಗೆವ್ವ ಕಿಲಬನೂರ, ಮತ್ತು ಗ್ರಾ ಪಂ ಸದಸ್ಯರು, ಎಸ್ ಡಿ ಎಂ ಸಿ ಸದಸ್ಯರು, ವಲಯದ ಎಲ್ಲ ಮುಖ್ಯೋಪಾಧ್ಯಾಯರು, ದೈಹಿಕ ಶಿಕ್ಷಕರು ಸಹ ಶಿಕ್ಷಕರು ಉಪಸ್ಥಿತರಿದ್ದರು.

ಶಿಕ್ಷಕಿಯರು ರೇಣುಕಾ ಬಂತಿ ನಿರೂಪಿಸಿದರು, ಸರೋಜಿನಿ ಕೀಲಿಪುಟ್ಟಿ ಸ್ವಾಗತಿಸಿದರು, ವಿನಾಯಕ ಶೆಟ್ಟಿ ಮಾಲಾರ್ಪಣೆ ನಡೆಸಿದರು, ಬಸವರಾಜ ರೋಣದ ವಂದಿಸಿದರು.
ವರದಿ: ಕುಮಾರ ಎಂ




