ಸೇಡಂ: ಕುರುಕುಂಟಾ ಗ್ರಾಮದ ವಿಧ್ಯಾ ನಿಧಿ ಪ್ರಾಥಮಿಕ ಶಾಲೆಯಲ್ಲಿ ಸತ್ಯ ಯುಗ ಫೌಂಡೇಷನ್ ಬೈ ಯುರೇನ್ ನಮಃ ಟ್ರಸ್ಟ್ ಹಾಗೂ ವಿಧ್ಯಾ ನಿಧಿ ಶಾಲೆಯ ಸಹಯೋಗದಲ್ಲಿ ಸೂರ್ಯ ಭಕ್ತಿ ವಿಜ್ಞಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಸೂರ್ಯ ಶಕ್ತಿಯ ಪರಿವರ್ತನೆ ಕಾಲವಾಗಿರುವ ಮಕರ ಸಂಕ್ರಾಂತಿಯ ಹಿನ್ನೆಲೆಯಲ್ಲಿ ಭೂಮಿಗೆ ಹಾಗೂ ಭೂಮಿಯ ಸಕಲ ಜೀವ ಜಂತುಗಳ ಹಾಗೂ ಮನುಷ್ಯನ ಜೀವನದ ಮೇಲೆ ಸೂರ್ಯ ಶಕ್ತಿಯ ಪ್ರಭಾವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ವಿವೇಚನೆಯಿಂದ ಸೂರ್ಯ ಶಕ್ತಿಯನ್ನು ನಾವು ಬಳಸಿಕೊಂಡಾಗ ಮನುಷ್ಯನ ಭೌತಿಕ, ಭೌದ್ದಿಕ, ಮಾನಸಿಕ, ಆಧ್ಯಾತ್ಮಿಕತೆ ಉನ್ನತಿ ಶತಸಿದ್ಧ.
ಈ ಹಿನ್ನೆಲೆಯಲ್ಲಿಯೇ ಸೂರ್ಯ ಆರಾಧನೆ ಪುರಾತನ ಕಾಲದಿಂದ ನಡೆದುಕೊಂಡು ಬಂದಿದೆ. ಸೂರ್ಯ ಆರಾಧನೆಯಿಂದ ಕಣ್ಣಿನ ಕಾಂತಿ, ಜಠಾರಾಗ್ನಿ, ಉತ್ತಮವಾಗಿರುತ್ತದೆ. ಸೂರ್ಯ ದೇವರಿಗೆ ಜಲ ಸಮರ್ಪಣೆ ಮಾಡುವ ವ್ಯಕ್ತಿ ಎಂದಿಗೂ ಆಹಾರದ ಅಲಬ್ದತೆಯಿಂದ ಉಪವಾಸ ಇರುವುದಿಲ್ಲ. ಸೂರ್ಯ ಶಕ್ತಿ ಮನುಷ್ಯನಿಗೆ ಸಿಗುವ ಉಚಿತ ಔಷಧ. ಸೂರ್ಯ ದೇವರು ಶಕ್ತಿಯ ಖನಿಜ. ನಾವು ಬೆಳಕು, ಉಷ್ಣತೆ, ಶಕ್ತಿಗಾಗಿ ನೇರವಾಗಿ ಸೂರ್ಯ ದೇವರ ಮೇಲೆ ಅವಲಂಬಿಸಿದ್ದೇವೆ.
ಮಕರ ಸಂಕ್ರಾಂತಿ ಸೂರ್ಯ ಚಲನೆಯ ದಿಕ್ಕು ಪರಿವರ್ತನೆಯ ಕಾಲ. ಈ ಸಮಯದಲ್ಲಿ ಸೂರ್ಯ ಶಕ್ತಿ ಎಲ್ಲರ ಅನುಭವಕ್ಕೆ ಬರುತ್ತದೆ.
ಭೂಮಿಗೆ 90 ರಷ್ಟು ಶಕ್ತಿ ಸೂರ್ಯ ದೇವರಿಂದ ಬರುತ್ತದೆ. ಬೆಳಕು, ಉಷ್ಣತೆ, ಶಕ್ತಿಗಾಗಿ ನೆರವಾಗಿ ನಾವು ಸೂರ್ಯ ದೇವರ ಮೇಲೆ ಅವಲಂಬಿತರಾಗಿದ್ದೇವೆ. 5,6 ಗಂಟೆ ನಾವು ವಿದ್ಯುತ್ ಬಳಸಿ ಬಿಲ್ ಕಟ್ಟದಿದ್ದರೆ ನಮ್ಮ ಕರೆಂಟ್ ಕನೆಕ್ಷನ್ ಕಟ್ ಆಗುತ್ತದೆ. ಆದರೆ ಸೂರ್ಯ ದೇವರಿಗೆ ಬಿಲ್ ಕೊಡುವುದು ದೂರದ ವಿಷಯ ನಾವು ಧನ್ಯವಾದಗಳನ್ನು ಹೇಳಿ ಹೇಳುವುದಿಲ್ಲ.
ಈ ಧನ್ಯವಾದ ಹೇಳುವ ಸಲುವಾಗಿಯೇ ಸೂರ್ಯ ಆರಾಧನೆಯನ್ನು ಮಾಡಲಾಗಿದೆ. ಈ ಶಕ್ತಿಯ ಬಗ್ಗೆ ನಮ್ಮಲ್ಲಿ ಭಕ್ತಿ ಭಾವ ಇದ್ದಲ್ಲಿ ನಮ್ಮ ದೈಹಿಕ ಮಾನಸಿಕ ಬೌದ್ಧಿಕ ಆಧ್ಯಾತ್ಮಿಕ ಉನ್ನತಿ ಆಗುತ್ತದೆ. ಈ ವಿಷಯವನ್ನೇ ಮಕ್ಕಳಿಗೆ ತಿಳಿಸಲಾಯಿತು.
ಕಾರ್ಯಕ್ರಮವನ್ನು ಸತ್ಯ ಯುಗ ಫೌಂಡೇಷನ್ ಅಧ್ಯಕ್ಷರಾದ ಶಿವಕಾಂತಮ್ಮ ಚಿಮ್ಮನಚೋಡಕರ ಉದ್ಘಾಟಿಸಿದರು. ವಿಧ್ಯಾ ನಿಧಿ ಶಾಲೆಯ ಅಧ್ಯಕ್ಷರಾದ ತುಳಸಿರಾಮ ಪವಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಸಿ ಆರ ಪಿ ವಿಷ್ಣುವರ್ಧನ ರೆಡ್ಡಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯರಾದ ಪದ್ಮಾವತಿಯವರು ವೇದಿಕೆ ಮೇಲಿದ್ದರು.
ಕಾರ್ಯಕ್ರಮದ ಅಂತ್ಯದಲ್ಲಿ ಶಾಲೆಯ ನೂರಾರು ಮಕ್ಕಳು ಸೂರ್ಯ ದೇವರಿಗೆ ಭಕ್ತಿಯಿಂದ ಜಲ ಸಮರ್ಪಿಸಿದರು.ಕಾರ್ಯಕ್ರಮವನ್ನು ಶಿಕ್ಷಕರಾದ ಶ್ರೀಕಾಂತ ನಿರೂಪಿಸಿದರು. ಶಿಕ್ಷಕರಾದ ಗುರು ಪ್ರಸಾದ ಸ್ವಾಗತಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಸೂರ್ಯ ನಾರಾಯಣ ಚಿಮ್ಮನಚೋಡಕರ್ ಕಾರ್ಯದರ್ಶಿಗಳು ಸತ್ಯ ಯುಗ ಫೌಂಡೇಷನ್ ಬೈ ಯುರೇನ್ ನಮಃ ಟ್ರಸ್ಟ್, ಶಾಲೆಯ ಶಿಕ್ಷಕರು ಪಾಲಕರು,ವಿಧ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್