ಬೆಂಗಳೂರು: ಹಾವನೂರು ಆಯೋಗದ ಅಧ್ಯಕ್ಷರಾಗಿ, ಹಿಂದುಳಿದ ವರ್ಗಗಗಳ ಹರಿಕಾರ ಎಂಬುದಾಗಿಯೇ ಹೆಸರು ಗಳಿಸಿದ್ದಂತ ಹ ಎಲ್ ಜಿ ಹಾವನೂರು ಅವರ ಪತ್ನಿ ಸುಶೀಲಾ ಹಾವನೂರು ಇಂದು ನಿಧನರಾಗಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಸಂತಾಪ ಪೋಸ್ಟ್ ಮಾಡಿರುವಂತ ಸಿಎಂ ಸಿದ್ಧರಾಮಯ್ಯ ಅವರು, ಹಾವನೂರು ಆಯೋಗದ ಅಧ್ಯಕ್ಷರಾಗಿದ್ದ ಎಲ್.ಜಿ.ಹಾವನೂರು ಅವರ ಧರ್ಮಪತ್ನಿ ಸುಶೀಲಾ ಹಾವನೂರು ಅವರ ನಿಧನದ ವಾರ್ತೆ ನೋವುಂಟು ಮಾಡಿದೆ ಎಂದಿದ್ದಾರೆ.
ತಮ್ಮ ಪತಿಯ ಸಾಮಾಜಿಕ ನ್ಯಾಯದ ಆಶಯಕ್ಕೆ ಒತ್ತಾಸೆಯಾಗಿದ್ದ ಸುಶೀಲಾ ಅವರು, ಎಂದಿಗೂ ಪ್ರಚಾರ ಬಯಸದೆ ಎಲೆಮರೆಯ ಕಾಯಂತೆ ಸಮಾಜಕ್ಕೆ ಕೈಲಾದ ಸೇವೆ ಸಲ್ಲಿಸಿದವರು ಎಂದು ಹೇಳಿದ್ದಾರೆ.
ಮೃತ ಎಲ್ ಜಿ ಹಾವನೂರು ಅವರ ಪತ್ನಿ ಸುಶೀಲಾ ಹಾವನೂರು ಅವರ ಆತ್ಮಕ್ಕೆ ಶಾಂತಿ ದೊರಕಲೆಂದು ಪ್ರಾರ್ಥಿಸುತ್ತೇನೆ. ಸುಶೀಲಮ್ಮನವರ ದುಃಖತಪ್ತ ಕುಟುಂಬಕ್ಕೆ ನನ್ನ ಸಂತಾಪಗಳನ್ನು ತಿಳಿಸಿದ್ದಾರೆ.