Ad imageAd image

ತಿಂಡಿ ಮಾಡಲ್ಲ ಎಂದಿದ್ದಕ್ಕೆ ಅತ್ತೆಯನ್ನ ಕೊಲೆ ಮಾಡಿದ ಸೂಸೆ

Bharath Vaibhav
ತಿಂಡಿ ಮಾಡಲ್ಲ ಎಂದಿದ್ದಕ್ಕೆ ಅತ್ತೆಯನ್ನ ಕೊಲೆ ಮಾಡಿದ ಸೂಸೆ
WhatsApp Group Join Now
Telegram Group Join Now

ಕೊಡಗು: ತಿಂಡಿ ಮಾಡಲ್ಲ ಎಂದಿದ್ದಕ್ಕೆ ಅತ್ತೆಯನ್ನು ಸೊಸೆ ಕೊಲೆ ಮಾಡಿರುವ ಘಟನೆ ಮಡಿಕೇರಿ ತಾಲೂಕಿನ ಮರಗೋಡಿನಲ್ಲಿ ನಡೆದಿದೆ.ಮರಗೋಡಿನ ನಿವಾಸಿ ಪೂವಮ್ಮ (73) ಮೃತ ದುರ್ದೈವಿ. ಬಿಂದು (26) ಕೊಲೆಗೈದ ಆರೋಪಿಯಾಗಿದ್ದಾರೆ.

ಏಪ್ರಿಲ್ 15ರಂದು ಈ ಘಟನೆ ನಡೆದಿದ್ದು, ಘಟನೆ ತಡವಾಗಿ ಬಂದಿದೆ ಎನ್ನಲಾಗಿದೆ.ಅಂದ ಹಾಗೇ ಅತ್ತೆಯನ್ನು ಕೊಲೆಗೈದ ಬಳಿಕ ಸಹಜ ಸಾವು ಎಂದು ಬಿಂಬಿಸಿದ್ದಳು, ಪೊಲೀಸ್‌ ತನಿಖೆಯಲ್ಲಿ ಇದು ಕೊಲೆ ಅಂತ ತಿಳಿದು ಬಂದ ಹಿನ್ನಲೆಯಲ್ಲಿ ಸದ್ಯ ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅತ್ತೆಗೆ ಬೆಳಗ್ಗಿನ ಉಪಾಹಾರ ಮಾಡಲು ಬರುವಂತೆ ಬಿಂದು ಕರೆದಿದ್ದಾಳೆ. ಈ ಸಂದರ್ಭ ತಿಂಡಿ ಮಾಡಲು ನಿರಾಕರಿಸಿದ ಹಿನ್ನೆಲೆ ವಾಗ್ವಾದ ಉಂಟಾಗಿದೆ. ಈ ಸಂದರ್ಭ ಕೋಪಗೊಂಡ ಬಿಂದು ಕೈಯಲ್ಲಿದ್ದ ಮೊಬೈಲ್‌ನಿಂದ ತಲೆಯ ಹಿಂಭಾಗಕ್ಕೆ ಹಲ್ಲೆಗೈದಿದ್ದಾಳೆ ಎನ್ನಲಾಗಿದೆ.

ಈ ನಡುವೆ ಅಂತ್ಯಸಂಸ್ಕಾರ ಎಲ್ಲ ನಡೆದಿದೆ.ಘಟನೆ ನಡೆದ ಸ್ಥಳ, ದಿಂಬಿನ ಕವರ್, ಬಟ್ಟೆಯ ಮೇಲೆ ರಕ್ತದ ಕಲೆಗಳನ್ನು ಕಂಡ ಬಿಂದು ಪತಿ ಪ್ರಸನ್ನ ಅವರಿಗೆ ಸಂಶಯ ಮೂಡಿದ ವೇಳೆಯಲ್ಲಿ ಪತಿ ಪ್ರಸನ್ನ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಬಳಿಕ ಸೊಸೆಯ ಕೃತ್ಯ ಬಯಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು, ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

 

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!