Ad imageAd image

ಪತ್ನಿ ಜೊತೆ ಅಕ್ರಮ ಸಂಬಂದದ ಸಂಶಯ : ಸ್ನೇಹಿತನನ್ನೇ ಹತ್ಯೆಗೈದ ಗಂಡ

Bharath Vaibhav
ಪತ್ನಿ ಜೊತೆ ಅಕ್ರಮ ಸಂಬಂದದ ಸಂಶಯ : ಸ್ನೇಹಿತನನ್ನೇ ಹತ್ಯೆಗೈದ ಗಂಡ
CRIME
WhatsApp Group Join Now
Telegram Group Join Now

ಬೆಳಗಾವಿ: ಅನುಮಾನ ಎಂಬುದು ತಲೆಗೆ ಹೊಕ್ಕರೆ ಯಾವ ಮಟ್ಟಕ್ಕೆ ಬೇಕಾದರೂ ಮನುಷ್ಯ ಇಳಿಯುತ್ತಾನೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ತನ್ನ ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿರಬಹುದು ಎಂಬ ಸಂಶಯಕ್ಕೆ ಪತಿ ಮಹಾಶಯನೊಬ್ಬ ತನ್ನ ಸ್ನೇಹಿತನನ್ನೇ ಹತ್ಯೆಗೈದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಈ ಘಟನೆ ನಡೆದಿದೆ. ಬಸವರಾಜ್ ಬುಕನಟ್ಟಿ ಎಂಬಾತ ತನ್ನ ಸ್ನೇಹಿತನನ್ನು ತಲ್ವಾರ್ ನಿಂದ ಇರಿದು ಕೊಂದಿದ್ದಾನೆ. ಮಹಾಂತೇಶ್ ಕೊಲೆಯಾದ ವ್ಯಕ್ತಿ.

ಬಸವರಾಜ್ ಬುಕನಟ್ಟಿ ಪ್ರತಿದಿನ ಕುಡಿದು ಬಂದು ತನ್ನ ಪತ್ನಿಗೆ ಹಿಂಸಿಸುತ್ತಿದ್ದನಂತೆ. ತನ್ನ ಸ್ನೇಹಿತನಿಗೆ ನೀನು ಫೋನ್ ಮಾಡಿ ಮಾತನಾಡುತ್ತಿರಬಹುದು. ಮೆಸೇಜ್ ಕಳುಹಿಸಿರಬಹುದು ಎಂದು ಅನಗತ್ಯವಾಗಿ ಅನುಮಾನ ಪಡುತ್ತಿದ್ದನಂತೆ.

ಇದೇ ರೀತಿ ಸ್ನೇಹಿತ ಮಹಾಂತೇಶ್ ಗೂ ತನ್ನ ಪತ್ನಿಗೆ ನೀನು ಮೆಸೇಜ್ ಮಾಡುತ್ತಿರಬಹುದು . ನೀನಿ ಕಾಲ್ ಮಾಡುತ್ತೀಯಾ ಎಂದೆಲ್ಲ ಜಗಳವಾಡಿದ್ದನಂತೆ. ಸ್ನೇಹಿತರಿಬ್ಬರ ನಡುವೆ ಜಗಳ ಶುರುವಾಗಿ ಬಸವರಾಜ್ ಕೋಪದಲ್ಲಿ ತಲ್ವಾರ್ ನಿಂದ ಮಹಾಂತೇಶ್ ನನ್ನು ಕೊಚ್ಚಿ ಕೊಲೆಗೈದಿದ್ದಾನೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!