ಒಡಿಶಾ: ಭಾರತದ ಅನೇಕ ಜಿಲ್ಲೆಗಳಲ್ಲಿ ಚಿನ್ನದ ನಿಕ್ಷೇಪಗಳು ಇರುವ ಬಗ್ಗೆ ಸುದ್ದಿಗಳಿತ್ತು, ಇದೀಗ ಅಧಿಕೃತವಾಗಿ ಕೆಲ ನಿಕ್ಷೇಪಗಳು ಪತ್ತೆಯಾಗಿದ್ದು, ಒಡಿಶಾದ (Odisha) ಹಲವಾರು ಜಿಲ್ಲೆಗಳಲ್ಲಿ ಸುಮಾರು 20 ಟನ್‌ಗಳಷ್ಟು ಚಿನ್ನದ ಸಂಗ್ರಹವಿರುವ ನಿಕ್ಷೇಪ ಪತ್ತೆಯಾಗಿದೆ.
ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ (GSI) ನ ಇತ್ತೀಚಿನ ಶೋಧನೆಯ ನಂತರ ರಾಜ್ಯ ಸರ್ಕಾರ ಮತ್ತು ಗಣಿಗಾರಿಕೆ ಇಲಾಖೆ ತಕ್ಷಣವೇ ಕಾರ್ಯಪ್ರವೃತ್ತವಾಗಿದೆ.
ಯಾವ ಪ್ರದೇಶದಲ್ಲಿ ಚಿನ್ನ ಲಭಿಸಿದೆ?
ಸದ್ಯದ ಮಾಹಿತಿ ಪ್ರಕಾರ, ದೇವಗಢ, ಸುಂದರಗಢ, ನಬರಂಗಪುರ, ಕಿಯೊಂಝಾರ, ಅಂಗುಲ್, ಕೊರಾಪುಟ ಹಾಗೂ ಮಯೂರಭಂಜ, ಮಲ್ಕಾನಗಿರಿ, ಸಂಬಲ್‌ಪುರ ಮತ್ತು ಬೌದ್ ಜಿಲ್ಲೆಗಳಲ್ಲಿ ಚಿನ್ನ ನಿಕ್ಷೇಪ ಇರುವುದು ದೃಢವಾಗಿದ್ದು, ಈ ಪ್ರದೇಶಗಳಲ್ಲಿ ಶೋಧನೆ ನಡೆಯುತ್ತಿದೆ.
ಈ ವಿಚಾರವನ್ನ ಮಾರ್ಚ್ 2025 ರಲ್ಲಿ ಗಣಿ ಸಚಿವ ಬಿಭೂತಿ ಭೂಷಣ್ ಜೇನಾ ಒಡಿಶಾ ಶಾಸಕಾಂಗ ಸಭೆಯಲ್ಲಿ ಹೇಳಿದಾಗ ಸುದ್ದಿ ಹರಡಿದ್ದು, ಇದುವರೆಗೂ ಅನೇಕ ಪ್ರಮಾಣದ ಚಿನ್ನ ಲಭಿಸಿದೆ ಎನ್ನಲಾಗುತ್ತಿದೆ.




