ಚಿಟಗುಪ್ಪ: ಸೈಯದ್ ಸಲಾಂ ಪಾಶಾ ಜಿಲ್ಲಾಧಿಕಾರಿಗಳಿಗೆ ತಪ್ಪು ಮಾಹಿತಿ ಕೊಡುತ್ತಿದ್ದಾರೆ ಎಂದು ನನ್ನ ವಿರುದ್ಧ ಆರೋಪ ಮಾಡುತ್ತಿರುವ ಮಹಮ್ಮದ್ ಯೂಸುಫ್ ಅಲಿ ಜಮಾದಾರ್ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಎಂದು ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಸೈಯದ್ ಸಲಾಂ ಪಾಶಾ ಹೇಳಿದ್ದಾರೆ.
ಚಿಟಗುಪ್ಪ ತಾಲ್ಲೂಕಿನ ಮನ್ನಾಏಖೇಳಿ ಗ್ರಾಮದಲ್ಲಿ ಮಂಗಳವಾರ ಮಾಧ್ಯಮ ಜೊತೆಗೆ ಮಾತನಾಡಿದ ಸೈಯದ್ ಸಲಾಂ ಪಾಶಾ,ಸ್ಮಶಾನ ಭೂಮಿ ಮಂಜೂರು ಮಾಡಿ ಎಂದು ಜಿಲ್ಲಾಧಿಕಾರಿಗೆ ಮುಖಂಡರ ಜೊತೆಗೂಡಿ ಮನವಿ ಮಾಡಿದ್ದೇವೆ.
ಸ್ಮಶಾನ ಭೂಮಿ ಕೆಳುವುದು ನಮ್ಮ ಹಕ್ಕಿದೆ,ಇದರಲ್ಲಿ ತಪ್ಪೇನಿದೆ,ಸುಖ ಸುಮ್ಮನೆ ನನ್ನ ವಿರುದ್ಧ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಯೂಸುಫ್ ಅಲಿ ಜಮಾದಾರ ಆರೋಪ ಮಾಡುತ್ತಿರುವುದು ಸರಿಯಿಲ್ಲ.
ಬಹಿರಂಗ ಚರ್ಚೆ ಏರ್ಪಡಿಸೋಣ ನೀವು ನನಗೆ ಸವಾಲ್ ಹಾಕಿ,ನಾನು ನಿಮಗೆ ಸವಾಲ್ ಹಾಕುತ್ತೇನೆ ಎಂದು ಸೈಯದ್ ಸಲಾಂ ಪಾಶಾ ಅವರು ಮಹಮ್ಮದ್ ಯೂಸುಫ್ ಅಲಿ ಜಮಾದಾರ್ ಅವರಿಗೆ ಬಹಿರಂಗ ಚರ್ಚೆಗೆ ಕರೆ ನೀಡುತ್ತಿದ್ದೇನೆ ಎಂದು ಹೇಳಿದರು.




