ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ಮೇಲೆ ಶೂ ಎಸೆಯುವ ಕೆಲಸಮಾಡಿದ ವಕೀಲ ರಾಕೇಶ್ ಕಿಶೋರ್ ನೆಡೆಯನ್ನು ಖಂಡಿಸಿ ಯಳಂದೂರು ತಾಲ್ಲೋಕು ವಕೀಲರ ಸಂಘವು ನ್ಯಾಯಾಲಯದ ಕಾರ್ಯಕಲಾಪಗಳಿಂದ ಹೊರೆಗಿಳಿದ್ದು ಸಂಕೇತಿಕ ಪ್ರತಿಭಟನೆ ನೆಡೆಸಲಾಯಿತು.
ಹಿರಿಯ ವಕೀಲರಾದ ಬಿ ಎಂ ಮಾದೇವಸ್ವಾಮಿ ಮಾತನಾಡಿ ಸಮಾಜದಲ್ಲಿ ನ್ಯಾಯಾಂಗ ಮುಖಂತರ ನಾವು ನ್ಯಾಯವನ್ನು ಕೇಳುತಿನಿ ಅಂತಹ ನ್ಯಾಯ ಮೂರ್ತಿಗಳಿಗೆ ಶೂ ಎಸೆಯುವ ಪ್ರಯತ್ನ ಮಾಡಿ ಅವಮಾನ ಗೊಳಿಸಿರುವ ಕೃತ್ಯಖಂಡನೀಯ ವಕೀಲ ಕಿಶೋರ್ ಹಿಂದೆ ಕಾಣದ ಕೆಲವು ಕೈಗಳ ಪಿತ್ತೂರಿಗಳು ನೆಡೆದಿವೆ.
ರಾಕೇಶ್ ಕಿಶೋರ್ ಸನಾತನ ಧರ್ಮಕೆ ಅಪಮಾನ ಮಾಡಿದರೆ ನಾವು ಸಹಿಸಲ್ಲ ಎಂದು ಹೇಳಿದನೇ ಇದರ ಇನ್ನಲೇ ನೋಡಿದರೆ ಇದು ಬೇಕು ಎಂದು ಮಾಡಿರುವ ಘಟನೆ ಆಗಿದೆ. ಇಂತಹ ನಾಲಾಯಕ್ ವಕೀಲನಿಗೆ ಕಾನೂನು ತಕ್ಕ ಪಾಠ ಕಲಿಸುತ್ತದೆ ಎಂದು ತಿಳಿಸಿದರು.
ತಾಲೋಕು ವಕೀಲರ ಸಂಘದ ಅಧ್ಯಕ್ಷರಾದ ರಾಜಣ್ಣ ಮಾತನಾಡಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯ ಮೂರ್ತಿ ಬಿ ಆರ್. ಗವಾಯಿ ಅವರಿಗೆ ಶೂ ಎಸೆಯಲು ಮುಂದಾದ ವಕೀಲ ರಾಕೇಶ್ ಕಿಶೋರನಿಗೆ ಭಾರತೀಯ ವಕೀಲರ ಪರಿಷತ್ ಸದ್ಯತ್ವ ರದ್ದು ಮಾಡಿದೆ ಅದಲ್ಲದೆ ಇವನಿಗೆ ಕಾನೂನಿನಲ್ಲಿ ಏನೆಲ್ಲಾ ಶಿಕ್ಷೆ ಆಗಬೇಕೋ ಅದೆಲ್ಲ ಆಗಬೇಕು ಎಂದು ನಾವು ತಹಸೀಲ್ದಾರ್ ರವರಿಗೆ ಮನವಿಯನ್ನು ನೀಡುತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿ ಸಿದ್ದರಾಜು, ಮಹದೇವಸ್ವಾಮಿ ಸಿ, ನಾಗರಾಜು, ಜಿಪಿ ನಾಗರಾಜು, ಸಂಪತ್, ಶಶಿಧರ್, ಕುಮಾರಸ್ವಾಮಿ, ಕಾಂತರಾಜ್, ಆರ್ ಕುಮಾರಸ್ವಾಮಿ, ಶಾಂತರಾಜು, ಜಯಶಂಕರ್, ನಾಗರತ್ನ, ಚಂದನ, ಮಹೇಶ್ವರಿ ಹಾಜರಿದ್ದರು.
ವರದಿ: ಸ್ವಾಮಿ ಬಳೇಪೇಟೆ




