ದೆಹಲಿ/ ಜಯಪುರ : ಅಸೋಸಿಯೇಷನ್ ಆಫ್ ಸ್ಮಾಲ್ & ಮಿಡಿಯಂ ನ್ಯೂಸ್ ಪೇಪರ್ ಆಫ್ ಇಂಡಿಯಾದ ರಾಷ್ಟ್ರೀಯ ಸಮ್ಮೇಳನವು ರಾಜಸ್ಥಾನ ದ ರಾಜಧಾನಿ ಜಯಪುರದಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ಕೆ.ಡಿ.ಚಂಡೋಲಾ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಜರುಗಿತು.
ಈ ಸಮ್ಮೇಳನದಲ್ಲಿ ಕರ್ನಾಟಕದ ನೂತನ ರಾಜ್ಯಾಧ್ಯಕ್ಷರಾಗಿ ಅಮನ್ ಕೊಡಗಲಿ ಹಾಗೂ ರಾಷ್ತ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ವೇಣುಗೋಪಾಲ್ ನಾಯಕ ಮತ್ತು ತಾರಿಕಾ ಬೇಲ್ಕರ್ ಇವರನ್ನು ಸರ್ವ ಸದಸ್ಯರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು ಎಂದು ರಾಷ್ಟ್ರೀಯ ಅಧ್ಯಕ್ಷ ರಾದ ಕೆ.ಡಿ.ಚಂಡೋಲಾರವರು ಘೋಶಿಸಿದರು. ರಾಜ್ಯ ದಲ್ಲಿ ಸಂಘವನ್ನು ಬಲಿಷ್ಟವಾಗಿ ಬೆಳೆಸಿ ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡು ಸಂಘಟಿಸಲು ತಿಳಿಸಿದರು.
ಅದರಂತೆ ರಾಜ್ಯ ಸಮೀತಿ ಸದಸ್ಯರಾಗಿ ದತ್ತಾತ್ರೇಯ ವಿ.ಪವಾರ, ಹುಬ್ಬಳ್ಳಿ, ಅಕ್ಮಲ್ ಪಾಷಾ ಮೈಸೂರು, ಹಾಗೂ ಶೇಖ ನಿಸಾರುದ್ದೀನ, ಬಾಬರ್,ರಾಯಚೂರು ಮತ್ತು ಡಾ.ಜಲಾಲುದ್ದೀನ ಅಕ್ಬರ್ , ನಮ್ಮೂರು ಶಾಸಕರು ಪತ್ರಿಕೆಯ ಸಂಪಾದಕರು, ಕಲಬುರ್ಗಿ, ಇವರುಗಳನ್ನು ಆಯ್ಕೆ ಮಾಡಲಾಯಿತು ಎಂದು ರಾಷ್ಟ್ರೀಯ ಕಾರ್ಯದರ್ಶಿ ಕಟ್ರಿಯಾ ತಿಳಿಸಿದರು.
ಅಸೋಸಿಯೇಷನ್ ಆಫ್ ಸ್ಮಾಲ್ & ಮಿಡಿಯಂ ನ್ಯೂಸ್ ಪೇಪರ್ ಆಫ್ ಇಂಡಿಯಾದ ನೂತನ ರಾಜ್ಯಾಧ್ಯಕ್ಷರಾಗಿ ಅಮನ್ ಕೊಡಗಲಿ
