ಚನ್ನಮ್ಮನ ಕಿತ್ತೂರು : ಕಿತ್ತೂರಿನ ಕೆ.ಎನ್.ವ್ಹಿ.ವ್ಹಿ. ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಒಟ್ಟು 146 ವಿದ್ಯಾರ್ಥಿಗಳಲ್ಲಿ 72 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ 06, ಪ್ರಥಮ ಶ್ರೇಣಿಯಲ್ಲಿ 32, ದ್ವಿತೀಯ ಶ್ರೇಣಿಯಲ್ಲಿ 20, ತೃತೀಯ ಶ್ರೇಣಿಯಲ್ಲಿ 14, ವಿದ್ಯಾರ್ಥಿಗಳು ಯಶಸ್ಸುಗೊಂಡಿದ್ದಾರೆ. ಒಟ್ಟಾರೆ ಕಾಲೇಜಿಗೆ ಶೇಕಡಾ 51.32 % ಫಲಿತಾಂಶ ಬಂದಿದೆ.
ಇದರಲ್ಲಿ ಕಲಾ ವಿಭಾಗದಲ್ಲಿ 48.36% , ವಾಣಿಜ್ಯ ವಿಭಾಗದಲ್ಲಿ,55.17% ರಷ್ಟು ಫಲಿತಾಂಶ ಬಂದಿದೆ. ಐತಿಹಾಸಿಕ ಚನ್ನಮ್ಮನ ನಾಡಿನಲ್ಲಿ ವಿದ್ಯಾರ್ಥಿನಿಯರೇ ಮೆಲುಗೈ ಸಾಧಿಸಿದ್ದಾರೆ.
ಕಲಾ ವಿಭಾಗದಲ್ಲಿ ಸವಿತಾ ಕೆಳಗಿನಮನಿ 577 (96.16) ರಂಜಿತಾ ದೊಡಮನಿ 515 (85.83) ಅನುಸೂಯಾ ಶೀಗಿಹಳ್ಳಿ,,(514) 85.66%, ವಾಣಿಜ್ಯ ವಿಭಾಗದಲ್ಲಿ ಪೂಜಾ ಸಾಧುನವರ 555(92.50), ಜ್ಯೋತಿ ಸಾಧುನವರ 546(91.00%) ವಿದ್ಯಾ ಇಟಿಗಿ 484(80.66%) ಈ ವಿದ್ಯಾರ್ಥಿಗಳು ಪ್ರಥಮ, ದ್ವಿತೀಯ, ಹಾಗೂ ತೃತೀಯ ಸ್ಥಾನ ಪಡೆದು ಕಾಲೇಜಿಗೆ ಕಿರ್ತಿ ತಂದಿದ್ದಾರೆ.
ಅರ್ಥಶಾಸ್ತ ವಿಷಯದಲ್ಲಿ ಸವಿತಾ ಕೆಳಗಿನಮನಿ 100 ಕ್ಕೆ 100 ಅಂಕ ಪಡೆದು ಬೆಳಗಾವಿ ಜಿಲ್ಲೆಗೆ ರ‍್ಯಾಂಕ್
6ನೇ ಬಂದಿದ್ದಾಳೆ ಕನ್ನಡ ವಿಷಯದಲ್ಲಿ ಜ್ಯೋತಿ ಸಾಧುನವರ 100 ಕ್ಕೆ 100, ವಿದ್ಯಾ ಇಟಿಗಿ 100 ಕ್ಕೆ 100 ಅಂಕ ಪಡೆದಿದ್ದಾರೆ. ಪರೀಕ್ಷೆಯಲ್ಲಿ ಯಶಸ್ಸುಗೊಳಿಸಿದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯ ಅಧ್ಯಕ್ಷರು, ಗೌರವ ಕಾರ್ಯದರ್ಶಿಗಳು, ಹಾಗೂ ಸರ್ವ ನಿರ್ದೇಶಕರು, ಪ್ರಾಚಾರ್ಯರು, ಬೋಧಕರು, ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ವರದಿ: ಬಸವರಾಜ ಭಿಮರಾಣಿ