ನಿಡಗುಂದಿ : ಭಾರತವು 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಪಡೆದರೂ, ನಮ್ಮ ಸಂವಿಧಾನ ಜಾರಿಗೆ ಬಂದದ್ದು 1950ರ ಜನವರಿ 26ರಂದು. ಆ ದಿನದಿಂದ ನಮ್ಮ ಭಾರತವು ಅಧಿಕೃತವಾಗಿ ಸರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ, ಪ್ರಜಾಸತ್ತಾತ್ಮಕ ಗಣರಾಜ್ಯವಾಯಿತು.
ಭಾರತವು ಅನೇಕ ಭಾಷೆ, ಸಂಸ್ಕೃತಿ ಮತ್ತು ಧರ್ಮಗಳ ಸಂಗಮ. ಗಣರಾಜ್ಯೋತ್ಸವದ ದಿನ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು “ವೈವಿಧ್ಯತೆಯಲ್ಲಿ ಏಕತೆ” ಎಂಬ ಭಾರತದ ಮೂಲತತ್ವವನ್ನು ದೃಢಪಡಿಸುತ್ತವೆ.
ಒಂದು ಸಂವಿಧಾನ, ಒಂದು ರಾಷ್ಟ್ರ, ಒಂದು ಜನತೆ – ಈ ಭಾವನೆಯೇ ಗಣರಾಜ್ಯೋತ್ಸವ ಎಂದು ನಿಡಗುಂದಿಯ ದಂಡಧಿಕಾರಿ ಎ. ಡಿ. ಅಮರಾವದಗಿ ಮಾತನಾಡಿದರು.
ನಮ್ಮ ಹೆಮ್ಮೆಯ ನಿಡಗುಂದಿ ತಾಲೂಕು ರಾಜ್ಯದ ಅತಿ ದೊಡ್ಡ ಕೃಷ್ಣಾ ನದಿಯ ಮೇಲ್ದಂಡೆ ಯೋಜನೆ, ಆಲಮಟ್ಟಿ ಸುಂದರವಾದ ಉದ್ಯಾನವನ ಹೊಂದಿದ್ದು ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ನಿಡಗುಂದಿ ತಾಲೂಕಿನ, ಜಿಲ್ಲೆಯ ರಾಜ್ಯದ ದೇಶದ ಪ್ರಗತಿಗಾಗಿ ಬಸವಣ್ಣನವರ ಮಾರ್ಗದಲ್ಲಿ ವಿವಿಧತೆಯಲ್ಲಿ ಏಕತೆಯ ಮನೋಭಾವನೆಯನ್ನು ಬೆಳೆಸಿಕೊಳ್ಳೋಣ. ಸ್ವತಂತ್ರಕ್ಕಾಗಿ ಹೋರಾಡಿದ ಎಲ್ಲ ಗಣ್ಯರನ್ನು ನೆನೆಸಿ ಮತ್ತೊಮ್ಮೆ ಗಣರಾಜ್ಯೋತ್ಸವದ ಶುಭಾಶಯ ಕೋರಿದರು.
ಸಂಸ್ಕೃತಿಕ ಕಾರ್ಯಕ್ರಮಗಳು ಚಿಕ್ಕ ಮಕ್ಕಳ ಭಾಷಣ ಸನ್ಮಾನ ಜರುಗಿತು.
ಈ ಕಾರ್ಯಕ್ರಮದಲ್ಲಿ , ಪ್ರತಾಪ. ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯತ. ಎಸ್.ಬಿ. ಗೌಡರ ವೃತ್ತ ನಿರೀಕ್ಷಕರು.ಹಾಗೂ ಇ ಸಿ ಓ ಉದಯಕುಮಾರ್ ಬಶೆಟ್ಟಿ , ಬಿ ಟಿ ಗೌಡರ, ಪಟ್ಟಣ ಪಂಚಾಯತಿ ಎಲ್ಲ ಸದಸ್ಯರು, ಊರ ಮುಖಂಡರು, ವಿವಿಧ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಶಿಕ್ಷಕ ಶಿಕ್ಷಕಿರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ವರದಿ : ಅಲಿ ಮಕಾನದಾರ




