Ad imageAd image

ಹೊಲಕ್ಕೆ ದಾರಿ ಗುರುತಿಸಿಕೊಡಲು ತಹಸೀಲ್ದಾರ್ ಗೆ ಮನವಿ

Bharath Vaibhav
ಹೊಲಕ್ಕೆ ದಾರಿ ಗುರುತಿಸಿಕೊಡಲು ತಹಸೀಲ್ದಾರ್ ಗೆ ಮನವಿ
WhatsApp Group Join Now
Telegram Group Join Now

ಚೇಳೂರು : ರೈತ ಡಿ ವೆಂಕಟರವಣ ನಾಯಕ ಎಂಬುವರ ಹೊಲಕ್ಕೆ ಹೋಗುವ ಬಂಡಿ ದಾರಿಯನ್ನು ಗುರುತಿಸಿ ಸಾಗುವಳಿ ಮಾಡಿದ ಬೆಳೆಗಳನ್ನು ಮನೆಗೆ ಸಾಗಿಸಲು ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.

ಪಾತಪಾಳ್ಯ ಹೋಬಳಿಯ ಬಿಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಯರಗಾನಪಲ್ಲಿ ಗ್ರಾಮದ ಡಿ ವೆಂಕಟರವಣ ನಾಯಕ ಎಂಬುವರ ಹೊಲಕ್ಕೆ ಬಿಳ್ಳೂರು 167 ಸರ್ವೆ ನಂಬರ್ ನಿಂದಾ ಬಾಬೇನಾಯಕನಹಳ್ಳಿ ಗ್ರಾಮದ 86 ಸರ್ವೆ ನಂಬರಿನಲ್ಲಿ ಹಾಗೂ ಗೊಲ್ಲಪಲ್ಲಿ ಗ್ರಾಮದ 65.64.63 ಸರ್ವೆ ನಂಬರ್ ಗಳ ಮೂಲಕ ತಮ್ಮ ಹೊಲಕ್ಕೆ ಹೋಗುವ ದಾರಿಯನ್ನು ಗುರುತಿಸಿ ಕೊಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ಈ ಸರ್ವೆ ನಂಬರ್ ಮೂಲಕ ಈಗಾಗಲೇ ಬಂಡಿ ದಾರಿ ಇದ್ದು ಸುಮಾರು ಆರು ತಿಂಗಳ ಹಿಂದೆ ಭೂ ಮಾಪನ ಇಲಾಖೆ ಅಧಿಕಾರಿಗಳು ಬಂದು ನಮ್ಮ ಹೊಲಕ್ಕೆ ಹೋಗುವ ರಸ್ತೆಯನ್ನು ಸರ್ವೆ ಮಾಡಿ ಹೋಗಿರುತ್ತಾರೆ, ಆದರೆ ಇದು ವರೆಗೂ ಅದರ ಅಚುಕಿ ಮಾತ್ರ ಏನು ಹೇಳಿರುವುದಿಲ್ಲ,ಹಾಗೂ ಒತ್ತುವರಿ ಬಿಡಿಸಿಕೊಡುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಸ್ತುತ ಬೇಸಿಗೆ ದಿನಗಳ ಕಾಲದಲ್ಲಿ ಹೊಲಗಳಲ್ಲಿ ಯಾರು ಯಾವುದೇ ಬೆಳೆಗಳನ್ನು ಬೆಳೆಯದ ಕಾರಣ ಪ್ರಸ್ತುತ ದಿನಗಳಲ್ಲಿ ಸರ್ವೆ ಮಾಡಿಸಿ ಒತ್ತುವರಿ ದಾರರಿಂದ ರಸ್ತೆಯನ್ನು ಬಿಡಿಸಿ ಕೊಡಲು ಸುಲಭವಾಗುತ್ತದೆ.

ಅಲ್ಲದೆ ಏಪ್ರಿಲ್ ಮೇ ತಿಂಗಳಲ್ಲಿ ಆದರೆ ರೈತರು ಉಳುಮೆ ಮಾಡಿ ವ್ಯವಸಾಯ ಮಾಡುವ ನಂತರದ ದಿನಗಳಲ್ಲಿ ಸರ್ವೆ ಕಾರ್ಯ ಮಾಡಿ ದಾರಿಯನ್ನು ಗುರುತಿಸಿ ಕೊಟ್ಟರು ಬೆಳೆಯನ್ನು ನಾಶ ಮಾಡಿ ಒತ್ತುವರಿ ತೆರವು ಮಾಡಲು ಸಾಧ್ಯವಾಗುವುದಿಲ್ಲ.

ಆದ್ದರಿಂದ ದಯವಿಟ್ಟು ಅಧಿಕಾರಿಗಳು ಸರ್ವೆ ಕಾರ್ಯ ನಡೆಸಿ ಹೊಲಕ್ಕೆ ದಾರಿ ಗುರುತಿಸಿಕೊಟ್ಟರೆ ಹೊಲಗಳಲ್ಲಿ ಬೆಳೆದ ಬೆಳೆಗಳು ಮನೆಗೆ ಸಾಗಿಸಲು ಅನುವು ಮಾಡಿಕೊಡಬೇಕು ಎಂದು ರೈತ ಡಿ ವೆಂಕಟರವಣ ನಾಯಕ ಎಂಬುವರು ತಹಸೀಲ್ದಾರ್ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ವರದಿ :ಯಾರಬ್. ಎಂ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!