ಸಿಂಧನೂರು: ಮಾರ್ಚ್14 ರಂದು ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಘಟಕದಿಂದ ಹಮ್ಮಿಕೊಂಡಿದ್ದ ಡಾ. ಬಿಆರ್. ಅಂಬೇಡ್ಕರ್, ಕುರಿತು ರಾಜ್ಯಮಟ್ಟದ ಸ್ವರ್ಧಾತ್ಮಕ ಪರೀಕ್ಷೆಯ ಕರಪತ್ರವನ್ನು ತಹಶೀಲ್ದಾರ್ ಅರುಣ್ ಕುಮಾರ್ ದೇಸಾಯಿ ಬಿಡುಗಡೆ ಮಾಡಿ ಮಾತನಾಡಿ ಅಂಬೇಡ್ಕರ್ ರವರ 134ನೇ ಜನುಮದಿನದ ಅಂಗವಾಗಿ ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ ಹಮ್ಮಿಕೊಂಡಿದ್ದು ಶ್ಲಾಘನೀಯ ಪ್ರಥಮ ಬಹುಮಾನ 3 ಲಕ್ಷ ದ್ವಿತೀಯ ಬಹುಮಾನ 2 ಲಕ್ಷ ಹಾಗೂ ತೃತೀಯ ಬಹುಮಾನ 1 ಲಕ್ಷ ಜೊತೆಗೆ ಸ್ವರ್ಧಾತ್ಮಕ ಪರೀಕ್ಷೆಯಲ್ಲಿ ಭಾಗಿಯಾದ ಎಲ್ಲಾ ಪರೀಕ್ಷಾರ್ಥಿಗಳಿಗೆ ಪ್ರಮಾಣ ಪತ್ರ ನೀಡುವುದು ಒಳ್ಳೆಯ ಕಾರ್ಯ ಎಂದರು.
ಈ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ತಾಲೂಕ ಅಧ್ಯಕ್ಷ ದುರುಗೇಶ್ ಕಲ್ಮಂಗಿ, ತಾಲೂಕ ಪ್ರಧಾನ ಕಾರ್ಯದರ್ಶಿ ನರಸಪ್ಪ ಬಡಿಗೇರ್, ತಾಲೂಕ ಕಾರ್ಯದರ್ಶಿ ಶರಣಬಸವ ಸುಂಕನೂರು, ಇದ್ದರು.
Bv5 ನ್ಯೂಸ್
ಬಸವರಾಜ ಬುಕ್ಕನಹಟ್ಟಿ