Ad imageAd image

ಜೇಸಿಆಯ್ ಮಹಾಂತಶ್ರೀ ಸಿಟಿಯಿಂದ ತಹಶೀಲ್ದಾರ ಸತೀಶ ಕೂಡಲಗಿ ಅವರಿಗೆ ಬೀಳ್ಕೊಡುಗೆ

Bharath Vaibhav
ಜೇಸಿಆಯ್ ಮಹಾಂತಶ್ರೀ ಸಿಟಿಯಿಂದ ತಹಶೀಲ್ದಾರ ಸತೀಶ ಕೂಡಲಗಿ ಅವರಿಗೆ ಬೀಳ್ಕೊಡುಗೆ
WhatsApp Group Join Now
Telegram Group Join Now

ಇಳಕಲ್ : ತಾಲೂಕು ತಹಶೀಲ್ದಾರರಾಗಿ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡ ಸತೀಶ ಕೂಡಲಗಿ ಅವರನ್ನು ಇಳಕಲ್ ಜೇಸಿಆಯ್ ಮಹಾಂತಶ್ರೀ ಸಿಟಿ ಸಂಸ್ಥೆಯಿಂದ ಸನ್ಮಾನಿಸಿ ಬೀಳ್ಕೋಡುಗೆ ನೀಡಲಾಯಿತು

ಈ ಕುರಿತು ಮಾತನಾಡಿದ ಜೇಸಿಆಯ್ ಸದಸ್ಯ ಶಿರಸಪ್ಪ ಪತ್ತಾರ ತಹಶೀಲ್ದಾರ ಸತೀಶ ಕೂಡಲಗಿ ಅವರು ಜೇಸಿಆಯ್ ಹಮ್ಮಿಕೊಂಡ ಹಲವಾರು ಜನಪರ ಕಾರ್ಯಕ್ರಮಗಳಿಗೆ ಸ್ವತಃ ಆಸಕ್ತಿಯಿಂದ ಬೆಂಬಲವನ್ನು ನೀಡುತ್ತಾ ಜನಪರ ಕಾಳಜಿ, ಹಾಗೂ ಹಲವಾರು ಸಂಘ ಸಂಸ್ಥೆಗಳೊಂದಿಗೆ ಸಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುತಿದ್ದರು ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ ಕೂಡಲಗಿ ಅವರು ಇಳಕಲ್ ತಾಲೂಕಿನ ಜನತೆ ನನ್ನ ಅವಧಿಯಲ್ಲಿ ಸಾಕಷ್ಟು ಸಹಕಾರವನ್ನು ನೀಡಿದ್ದು ಜನತೆಗೆ ಹಾಗೂ ಎಲ್ಲಾ ಸಂಘ ಸಂಸ್ಥೆಗಳಿಗೆ ಧನ್ಯವಾದಗಳನ್ನು ಹೇಳಿದರು

ಜೇಸಿಆಯ್ ಅಧ್ಯಕ್ಷ ಹನುಮಂತ ಚುಂಚಾ,ಕಾರ್ಯದರ್ಶಿ ದರ್ಶನ ಮರಟದ, ಖಜಾಂಚಿ ರಾಘವೇಂದ್ರ ಶ್ಯಾವಿ, ನಿಕಟಪೂರ್ವ ಅಧ್ಯಕ್ಷ ಅಖಿಲ್ ಅಕ್ಕಿ, ಮಹಾಂತೇಶ ಗೊಂಗಡಶೆಟ್ಟಿ, ಆನಂದ ಪಾಟೀಲ, ಶ್ರೀಕಾಂತ ಚಿತ್ತರಗಿ, ಅಬ್ದುಲ್ ಕರೀಮ್ ಅತ್ತರ, ಮಂಜುನಾಥ ಕಿಡದೂರ, ಮಲ್ಲಿಕಾರ್ಜುನ ಇಂದರಗಿ, ರಾಘವೇಂದ್ರ ತುಗ್ಲಿ ಉಪಸ್ಥಿತರಿದ್ದರು

ವರದಿ : ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!