Ad imageAd image

ವಾಲ್ಮೀಕಿ ಮೀಸಲಾತಿಗೆ ಅನ್ಯರ ಸೇರ್ಪಡೆ ಬೇಡ ತಹಶೀಲ್ದಾರರಿಗೆ ಮನವಿ

Bharath Vaibhav
ವಾಲ್ಮೀಕಿ ಮೀಸಲಾತಿಗೆ ಅನ್ಯರ ಸೇರ್ಪಡೆ ಬೇಡ ತಹಶೀಲ್ದಾರರಿಗೆ ಮನವಿ
WhatsApp Group Join Now
Telegram Group Join Now

ವಿಜಯಪುರ  : ಬಸವನಬಾಗೇವಾಡಿ ಪಟ್ಟಣದಲ್ಲಿ ಅನ್ಯಜಾತಿಯವರಿಗೆ ಪರಿಶಿಷ್ಟರ ಪ್ರಮಾಣ ಪತ್ರವನ್ನು ನೀಡುವದನ್ನು ನಿಲ್ಲಿಸಬೇಕು. ಅಲ್ಲದೇ ಅನ್ಯಜಾತಿಯನ್ನು ಸೇರ್ಪಡೆ ಮಾಡಕೂಡದು ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕಾ ಘಟಕ ದಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ತಾಲೂಕಾ ಅಧ್ಯಕ್ಷ ರವಿ ನಾಯಕೋಡಿ ಮಾತನಾಡಿ, ಕಳೆದ ಏಳು ದಶಕಗಳು ಕಳೆಯುತ್ತಾ ಬಂದರೂ ಸಮಾಜದ ಮೇಲೆ ವಂಚನೆ, ಶೋಷಣೆ, ದಬ್ಬಾಳಿಕೆ ನಿರಂತರ ನಡೆಯತ್ತಾ ಬಂದಿದೆ. ಬದ್ಧವಾದ ಹಕ್ಕನ್ನು ಪಡೆದುಕೊಳ್ಳುವದಕ್ಕಾಗಿ ಹೋರಾಟಕ್ಕಿಳಿಯಬೇಕಾಗಿ ಬಂದಿರುವುದು ವಿಪರ್ಯಾಸವಾಗಿದೆ.
ಬೇಸ್ತ, ಅಂಬಿಗ, ಕಬ್ಬಲಿಗ, ಕಬ್ಬೇರ, ಕೋಲಿ ಇತರೆ ಪಂಗಡದವರು ಪ್ರವರ್ಗ ರಲ್ಲಿ ಬರುತ್ತಿದ್ದು ಅವರಿಗೆಲ್ಲ ಎಸ್‌ಟಿ ಪ್ರಮಾಣ ಪತ್ರವನ್ನು ನೀಡುವದನ್ನು ನಿಲ್ಲಿಸಬೇಕು. ನಕಲಿ ಪ್ರಮಾಣ ಪತ್ರ ಕೊಟ್ಟ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದೇ ಸಮಯದಲ್ಲಿ ಶೇಖಪ್ಪ ಲಿಂಗದಳ್ಳಿ ಪರುಶು ಬಡಿಗೇರ್ ಶ್ರೀಶೈಲ್ ಜಾಲವಾದಿ ಪಿ ಐ ಕೋಳೂರ ಬಸನಗೌಡ ಪಾಟೀಲ್ ಶ್ರೀಶೈಲ್ ಹೊನ್ನಳ್ಳಿ ಕಾಶಿನಾಥ್ ಬಡಿಗೇರ್ ಸಮಾಜದ ಮುಖಂಡರು ಉಪಸಿತರಿದ್ದರು.

ವರದಿ : ಕೃಷ್ಣಾ H. ರಾಠೋಡ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!