Ad imageAd image

ರಾತ್ರಿ ವೇಳೆಯ ಬರದೆ ಬಸ್ಸುಗಳು, ಪಟ್ಟಣದ ಹೊರವಲಯದಿಂದ,ಬೈಪಾಸ್ ಹೋಗುತ್ತಿರುವ ನಿರ್ವಾಹಕ,ಚಾಲಕರ ಮೇಲೆ ಸೂಕ್ತ ಕ್ರಮ ಜರುಗಿಸಿ.

Bharath Vaibhav
WhatsApp Group Join Now
Telegram Group Join Now

ಮುದಗಲ್ಲ :- ಕರ್ನಾಟಕ ರಕ್ಷಣಾ ವೇದಿಕೆ ಮುದಗಲ್ ಘಟಕದ ವತಿಯಿಂದ ಮುದಗಲ್ಲ ಬಸ್ ನಿಲ್ದಾಣದಲ್ಲಿ ಲಿಂಗಸೂರು ಬಸ್ ಘಟಕ ವ್ಯವಸ್ಥಾಪಕರಾದ ರಾಹುಲ್ ಅವರಿಗೆ ರಾತ್ರಿ ವೇಳೆಯ ಬಸ್ಸುಗಳ ಮುದಗಲ್ ಪಟ್ಟಣದಲ್ಲಿ ಬರದೆ ಬಸ್ಸುಗಳು ಪಟ್ಟಣದ ಹೊರವಲಯ ದಿಂದ ಬೈಪಾಸ್ ಹೋಗುತ್ತಿರುವ ನಿರ್ವಾಹಕ ಹಾಗೂ ಚಾಲಕರ ಮೇಲೆ ಸೂಕ್ತ ಕ್ರಮ ಜರುಗಿಸಿ ಹಾಗೂ ಈ ಕೂಡಲೇ ಬಸ್ಸುಗಳನ್ನು ಒಳಗೆ ತರುವಂತೆ ಆದೇಶಿಸಬೇಕೆಂದು
ಎಂದು ಮುದಗಲ್ಲ ಕರವೆ ಘಟಕದ ಅಧ್ಯಕ್ಷರಾದ ಎಸ್ ಎ ನಹೀಮ್ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.

ಐತಿಹಾಸಿಕ ಮುದಗಲ್ ಪಟ್ಟಣದಲ್ಲಿ ಸುಮಾರು ತಿಂಗಳು ಗಳಿಂದ ರಾತ್ರಿ ವೇಳೆ ಬರುವ ಬಸ್ಸುಗಳ ಪಟ್ಟಣದ ಹೊರಗಡೆ ಹೋಗುತ್ತಿದ್ದು ಜನರಿಗೆ ತುಂಬಾ ತೊಂದರೆಯಾಗಿದೆ.ಈ ಹಿಂದೆ ಇದರ ಬಗ್ಗೆ ಸುಮಾರು ನಮ್ಮ ಕರವೆ ವತಿಯಿಂದ ಹೋರಾಟಗಳನ್ನು ಮಾಡಿದ್ದು ಈ ಹಿಂದೆ ಒಂದು ಬಾರಿ ಮುದಗಲ್ ಬಂದ್ ಗೆ ಕರೆ ಕೊಟ್ಟಿದ್ದೇವೆ ನಾವು ಹೋರಾಟ ಮಾಡುತ್ತೇವೆ ಆವಾಗ ಕೆಲವು ತಿಂಗಳುಗಳವರೆಗೆ ಯತಾ ರೀತಿ ಬಸ್ಸುಗಳು ಮುದಗಲ್ ಪಟ್ಟಣದ ಒಳಗಡೆ ಬಂದು ಹೋಗಿದ್ದಾವೆ ಸ್ವಲ್ಪ ದಿನಗಳ ನಂತರ ಮತ್ತೆ ತಮ್ಮ ಬಸ್ಸುಗಳು ಚಾಲಕರು ಹಳೆಯ ಚಾಳಿಯನ್ನು ಮುಂದುವರಿಸಿದ್ದಾರೆ

ಇದರಿಂದ ಬಸ್ಸಿಗಾಗಿ ಕಾಯುತ್ತಾ ಕುಳಿತಿರುವ ರೋಗಿಗಳಿಗೆ, ವಿದ್ಯಾರ್ಥಿಗಳಿಗೆ ಮತ್ತು ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದೆ ಆದಕಾರಣ ಬಸ್ಸುಗಳ ಚಾಲಕರು ಹಾಗೂ ನಿರ್ವಾಹಕರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಮತ್ತು ಈ ಕೂಡಲೇ  ಬಸ್ಸುಗಳನ್ನು ಒಳಗೆ ತರುವಂತೆ ಆದೇಶಿಸಬೇಕೆಂದುಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಮುಂದಾಗ ಬೇಕಾಗುತ್ತದೆ ಎಂದು ಕರವೇ ಘಟಕಯ ಅಧ್ಯಕ್ಷರಾದ ಎಸ್ ಎ ನಹೀಮ್ ಮನವಿ ಪತ್ರ ಸಲ್ಲಿಸುವ ಮೂಲಕ ಒತ್ತಾಯ ಮಾಡಿದರು.

ಈ ಸಂದರ್ಭದಲ್ಲಿ
ಅಧ್ಯಕ್ಷ ಎಸ್.ಎ.ನಯೀಮ್, ಮಹಾಂತೇಶ ಚೆಟ್ಟರ್, ಎಸ್.ಎನ್.ಖಾದ್ರಿ, ಸಾಬು ಹುಸೇನ್, ಚನ್ನಪ್ಪ ಉಪ್ಪಾರ, ಬಾಲಪ್ಪ ಉಪ್ಪಾರ, ಆವೇಜ್ ಪಾಷ, ಮಂಜೂರ್, ನಾಗರಾಜ್ ಮಟ್ಟೂರ, ರಹೇಮಾನ್ ಜಂಬಾಳಿ,ಜಮಾಲಿ ಸಾಬ್, ಗ್ಯಾನಪ್ಪ ಛಲವಾದಿ, ಭೀಮಣ್ಣ ಉಪ್ಪಾರ,ಇಸ್ಮಾಯಿಲ್ ಕೊಳ್ಳಿ, ಅಮ್ಜದ ಖಾನ್ ರಫಿ ಇಂಗ್ಲೆಂಡ್, ಉಪಸ್ಥಿತರಿದ್ದರು.

ವರದಿ:- ಮಂಜುನಾಥ ಕುಂಬಾರ

WhatsApp Group Join Now
Telegram Group Join Now
Share This Article
error: Content is protected !!