Ad imageAd image

ರಾಜು ಕುನ್ನೂರು ಅಭಿಮಾನಿ ಬಳಗದಿಂದ ಪ್ರತಿಭಾ ಪುರಸ್ಕಾರ ಸಮಾರಂಭ

Bharath Vaibhav
ರಾಜು ಕುನ್ನೂರು ಅಭಿಮಾನಿ ಬಳಗದಿಂದ ಪ್ರತಿಭಾ ಪುರಸ್ಕಾರ ಸಮಾರಂಭ
WhatsApp Group Join Now
Telegram Group Join Now

ಹಾವೇರ :-ಇಂದು ಶಿಗ್ಗಾಂವಿನಲ್ಲಿ ರಾಜು ಕುನ್ನುರ್ ಅಭಿಮಾನಿ ಬಳಗದಿಂದ ಅವರ ೪೫ನೇ ಜನ್ಮ ದಿನದ ಪ್ರಯುಕ್ತ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ನಲ್ಲಿ ಓದುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಸಲಾಗಿದೆ.

ಈ ಕಾರ್ಯಕ್ರಮ ಶಿಗ್ಗಾಂವಿಯ ಹನಮಂತಗೌಡ್ರ ಪಾಟೀಲ್ ಕಲ್ಯಾಣ ಪಂಟಪದಲ್ಲಿ ರವಿವಾರ ರಾತ್ರಿ ಏರ್ಪಟ್ಟಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನ್ಯ ಉಪಸಭಪತಿಗಳುಗಳಾದ ರುದ್ರಪ್ಪ ಲಮಾಣಿ ಮತ್ತು ಬ್ಯಾಡಗಿ ಶಾಸಕರಾಗಿರುವ ಬಸವರಾಜ ಎಸ್ ಶಿವಣ್ಣವರ್ ಹಾಗೂ ವೇದಿಕೆಯ ಅಧ್ಯಕ್ಷತೆಯನ್ನು ಮಾಜಿ ಸಂಸದರಾಗಿರುವ ಮಂಜುನಾಥ ಸಿ ಕುನ್ನುರ್ ವಹಿಸಿರುತ್ತಾರೆ.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ.
ಧಾರವಾಡದ ಶಾಸಕರಾಗಿರುವ ವಿನಯ ಕುಲಕರ್ಣಿ ಮತ್ತು ಹಿರೇಕೆರೂರು ಶಾಸಕರಾಗಿರುವ ಯು ಬೀ ಬಣಕಾರ್ ಹಾಗೂ ಹಾನಗಲ್ ಶಾಸಕರು ಶ್ರೀನಿವಾಸ ಮಾನೆ ಮತ್ತು ರಾಣೆಬೆನ್ನೂರು ಶಾಸಕರು ಪ್ರಕಾಶ್ ಕೋಳಿವಾಡ ಹಾಗೂ ಡಿಡಿಪಿಐ ಉಮೇಶಪ್ಪ ಏಚ್ ಹಾವೇರಿ.ಸುರೇಶ್ ಹುಗ್ಗಿ ಡಿಡಿಪಿಐ ಹಾವೇರಿ. ಸಂತೋಷ್ ಹಿರೇಮಠ್ ತಶೀಲ್ದಾರ್ ಶಿಗ್ಗಾಂವಿ. ಗುರುಶಾಂತಪ್ಪ ಡಿವೈಎಸ್ಪಿ ಶಿಗ್ಗಾಂವಿ ಭಾಗಿಯಾಗಿದ್ದರು.

ಈ ಕಾರ್ಯಕ್ರಮದಲ್ಲಿ ಜೂನಿಯರ್ ರಾಜಕುಮಾರ್ ಮತ್ತು ಜೂನಿಯರ್ ಪುನೀತ್ ರಾಜಕುಮಾರ್ ಭಾಗಿಯಾಗಿದ್ದು ರಸಮಂಜರಿ ಕಾರ್ಯಕ್ರಮ ನಡೆಸಿದರು
ಎಲ್ಲ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ವ್ಯಕ್ತ ಪಡಿಸಿದ್ದು ಶಾಂತರೀತಿಯಿಂದ ಈ ಕಾರ್ಯಕ್ರಮವನ್ನು ನಡೆಸಲಾಗಿದೆ.
ಅದೇ ರೀತಿ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ರಾಜು ರವರಿಂದ ಸನ್ಮಾನ ಮಾಡಲಾಗಿದೆ.

ವರದಿ :-ರಮೇಶ್ ತಾಳಿಕೋಟಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!