ಸಿಂಧನೂರು : ನಗರದ ಟೌನ್ ಹಾಲ್ ನಲ್ಲಿ ಮಾದಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ಸಿಂಧನೂರು ವತಿಯಿಂದ ಭಾನುವಾರ ಮಾದಿಗ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮಾಡಲಾಯಿತು ಈ ಕಾರ್ಯಕ್ರಮದ ಉದ್ಘಾಟನೆ ಶಾಸಕ ಹಂಪನಗೌಡ ಬಾದರ್ಲಿ ಅವರು ವಹಿಸಿಕೊಂಡು ಮಾತನಾಡಿ,ಮಾದಿಗ ಸಮಾಜದ ಬಹುದಿನದ ಬೇಡಿಕೆ ಒಳ ಮೀಸಲಾತಿ ಸ್ವಲ್ಪ ತೊಡಕು ಇರುವ ಕಾರಣ ಅದನ್ನು ಪರಿಹರಿಸಿ ಆದಷ್ಟುಬೇಗ ಸನ್ಮಾನ್ಯ ಸಿದ್ದರಾಮಯ್ಯನವರು ನಿಮ್ಮ ಸಮಸ್ಯೆಯನ್ನು ಪರಿಹರಿಸುತ್ತಾರೆಂದು ನನ್ನ ಅಭಿಪ್ರಾಯ ಹಾಗೂ ಬಾಬಾ ಜಗಜೀವನ್ ರಾಮ್ ಅವರ ಭವನ ನಿರ್ಮಾಣಕ್ಕೆ ರೈಲ್ವೆ ಸ್ಟೇಷನ್ ಬಳಿರುವ 1 ಎಕರೆ ಜಮೀನಿನಲ್ಲಿ ಭವನ ನಿರ್ಮಾಣ ಮಾಡಬೇಕೆಂದು ಈಗಾಗಲೇ ರೂ 1 ಕೋಟಿ ಹಣವನ್ನು ಸರ್ಕಾರದಿಂದ ಬಿಡುಗಡೆ ಮಾಡಿದ್ದು ಅನುಮತಿ ದೊರೆತ ನಂತರ ಕಾಮಗಾರಿ ಆರಂಭವಾಗಲಿದೆ ಎಂದರು.

ಇದೇ ಸಂದರ್ಭದಲ್ಲಿ ಬಸನಗೌಡ ಬಾದರ್ಲಿ ವಿಧಾನ ಪರಿಷತ್ ಸದಸ್ಯರು ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಇದು ಒಂದು ಒಳ್ಳೆಯ ಕಾರ್ಯಕ್ರಮ ಆಯೋಜನೆ ಮಾಡಿದ್ದೀರಿ
ಶಿಕ್ಷಣ ಇದ್ದರೆ ಬದುಕು ಆಸ್ತಿ ಇದ್ದರೆ ಬದುಕಲ್ಲಾ, ನಾವು ನೀವು ಎಲ್ಲರೂ ಇಲ್ಲಿ ನಿಂತು ಮಾತಾಡುತ್ತೇವೆಂದರೆ ಇದಕ್ಕೆ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನವೇ ಕಾರಣ ಎಂದರು ಆದಷ್ಟು ಬೇಗ ನಿಮ್ಮ ಸಮಾಜಕ್ಕೆ ಒಳಮಿಸಲಾತಿ ಲಾಭ ದಕ್ಕಲಿ ಜಗಜೀವನ್ ರಾಮ್ ಭವನ ನಿರ್ಮಾಣವಾಗಲಿ ಭವನಕ್ಕೆ ನನ್ನ ಎಂಎಲ್ಸಿ ಅನುದಾನದಲ್ಲಿ 5 ಲಕ್ಷ ರೂ. ನೀಡುತ್ತೇನೆ ಎಂದರು.
ಕಾರ್ಯಕ್ರಮ ಅಧ್ಯಕ್ಷತೆ, ಲಿಂಗಪ್ಪ ಪಿ ಡಿ ಓ, ಅಧ್ಯಕ್ಷರು ಮಾದಿಗ ಕ್ಷೇಮಾಭಿವೃದ್ಧಿ ಸಂಘ, ಕ. ರಾ. ಸ. ನೌ. ಸಂಘ ಸಿಂಧನೂರು ಅವರು ವಹಿಕೊಂಡಿದ್ದು ವಿಶೇಷ ಉಪನ್ಯಾಸ ಕೃಷ್ಣ ಶಾವಾಂತಗೇರ ನಿರ್ದೇಶಕರು ಆಹಾರ ಇಲಾಖೆ ಹಾಗೂ ಜಿಲ್ಲಾ ಅಧ್ಯಕ್ಷರು ಕ. ರಾ. ಸ. ನೌ. ಸಂಘ ರಾಯಚೂರು ಉಪಸ್ಥಿತಿಯಲ್ಲಿ
ಮುಖ್ಯ ಅತಿಥಿಗಳಾಗಿ, ಕೆ. ಕರಿಯಪ್ಪ ಬಿ ಜೆ ಪಿ ಮುಖಂಡರು, ಬಿ. ರೆಡ್ಡಿ ಜಿಲ್ಲಾ ಅಧ್ಯಕ್ಷರು ಮಾದಿಗ ಕ್ಷಮಾಭಿವೃದ್ಧಿ ಸಂಘ, ಮರಿಯಪ್ಪ ಜಾಲಿಹಾಳ ಅಧ್ಯಕ್ಷರು ಮಾದಿಗ ಸಮಾಜ, ಆರ್. ಅಂಬ್ರುಶ್ ಕಾರ್ಯದರ್ಶಿ ಮಾದಿಗ ಸಮಾಜ, ಧನರಾಜ್ ಪ್ರಭಾರಿ ಎ ಇ ಇ, ದುರ್ಗಪ್ಪ ಅಸಮಕಲ್, ಡಾ. ಹುಸೇನಪ್ಪ ಅಮರಾಪುರ, ಈಶ್ವರ್ ಹಲಗಿ, ದುರ್ಗಪ್ಪ ಗುಡದೂರು, ಲಕ್ಷ್ಮಣ ಮೂಡಲಗಿರಿ ಕ್ಯಾಂಪ್, ಶೇಖರಪ್ಪ ಗಿಣಿವರ, ಅಲ್ಲಮ ಪ್ರಭು ಪೂಜಾರಿ, ಹುಲುಗಪ್ಪ ಉಪ್ಪಲದೊಡ್ಡಿ, ನಿರುಪಾದಿ ನಾಗಲಾಪುರ, ಡಿ. ಎಚ್. ಪೂಜಾರ್, ನಾಗರಾಜ ಕವಿತಾಳ, ಇನ್ನು ಅನೇಕರಿದ್ದರು
ವರದಿ:ಬಸವರಾಜ ಬುಕ್ಕನಹಟ್ಟಿ




