ಮೊಳಕಾಲ್ಮುರು:-ಪಟ್ಟಣದ ಪಾಂಡುರಂಗ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ,2023 – 24 ಸಾಲಿನಲ್ಲಿ ನಡೆದ S S L C ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕ ಪಡೆದ ಸ್ವಕುಳಿ ಸಾಳಿ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಗೌರವಿಸಲಾಯಿತು.ಪುರಸ್ಕಾರಕ್ಕೆ ಭಾಜಾನರದ ವಿದ್ಯಾರ್ಥಿಗಳಿಗೆ ರಮೇಶ್ ಪಾಣಿಭಾತೆ “ವನಸಿರಿ “ಹಾನಗಲ್, ಇವರು ನಗದು ಬಹುಮಾನಗಳನ್ನು ನೀಡಿದರು.
ಇನ್ನೂ ಇದೇ ಸಂದರ್ಭದಲ್ಲಿ ಸ್ವಕುಳ ಸಾಳಿ ಸಮಾಜದ ಪಿ ಯು ಸಿ , ಡಿಪ್ಲೋಮೋ ಬಿಎಸ್ಸಿ , ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯವಾಗಲೆಂದು ಸಹಾಯಧನ ನೀಡಲಾಯಿತು.
ಕಾರ್ಯಕ್ರಮದಲ್ಲಿ ರಮೇಶ್ ಪಾಣಿಬಾತೆ ಮಾತನಾಡಿ,ಇಂದಿನ ನಮ್ಮ ಸಮಾಜದ ಮಕ್ಕಳು ವಿದ್ಯಾಭ್ಯಾಸ ದ ಜೊತೆಗೆ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಬೇಕು. ಗುರಿ ಕೇವಲ ಇಂಜಿನಿಯರ್ ಡಾಕ್ಟರ್ ಕ್ಷೇತ್ರ ಮಾತ್ರ ವಲ್ಲದೆ ಬೇರೆ ಬೇರೆ ಅನೇಕ ಕ್ಷೇತ್ರ ಗಳ ಬಗ್ಗೆ ಗಮನ ಹರಿಸಬೇಕು , ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸ್ವಕುಳಸಾಳಿ ಸಮಾಜದ ಅಧ್ಯಕ್ಷರಾದ ಶ್ರೀ ನರೇಂದ್ರಕುಮಾರ್ ಗಯಾಕ್ವಾಡ್ ರವರು ಮಾತನಾಡಿ,ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗುವ ಇಂತಹ ಕಾರ್ಯಕ್ರಮಗಳಿಗೆ ಸಮಾಜದವರು ಹೆಚ್ಚಿನ ಪ್ರೋತ್ಸಾಹ ನೀಡಬೇಕು,ಮಹತ್ತರವಾದ ಕಾರ್ಯಕ್ರಮಗಳಲ್ಲಿ ಸಮಾಜದ ಎಲ್ಲಾ ಬಾಂಧವರು ಭಾಗವಹಿಸಿ ಹೆಚ್ಚಿನ ರೀತಿಯಲ್ಲಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಪಡೆದು ಮುಂದಿನ ಗುರಿಯನ್ನು ಮುಟ್ಟಲಿ ಉನ್ನತ ಹುದ್ದೆಗಳು ಪಡೆಯುವಂತಂಗಾಲಿ ಎಂದು ಹಾರೈಸಿದರು.
ಈ ಸಮಾರಂಭದಲ್ಲಿ ಸಮಾಜದ ಕಾರ್ಯದರ್ಶಿಯಾದ ಶ್ರೀ ಪಾಂಡುರಂಗ ಟೊಣಪೆ, ಖಜಾಂಚಿ ಶ್ರೀ ಧನಂಜಯ ಕಾಂಬಳೆ ,ಉಪನ್ಯಾಸಕರಾದ ಗಿರೀಶ್, ಸಮಾಜದ ಹೆಸರಾಂತ ವೈದ್ಯರಾದ ಡಾ ವಿನೋದ್ ಎಸ್ ಸರೋಡೆ ಯುವಕ ಸಂಘದ ಅಧ್ಯಕ್ಷ ಸಂತೋಷ್ ಏಕಬೋಟೆ, ದುರ್ಗಾದೇವಿ ದೇವಸ್ಥಾನ ಸಮಿತಿ ಅಧ್ಯಕ್ಷರು ಶ್ರೀ ಉದಯ್ ಕುಮಾರ್, ಮಹಿಳಾ ಮಂಡಳಿ ಗೌರವ ಅಧ್ಯಕ್ಷರು ಶ್ರೀಮತಿ ಸಾವಿತ್ರಿ ದಿವಟೆ, ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಗಿರೀಶ್ ಪಾಣಿಭಾತೆ,ಅಶೋಕ್, ಗಂಗಾಧರ್ ಗಾಯಕವಾಡ ಭಾಗವಹಿಸಿದ್ದರು.
ವರದಿ :-ಪಿಎಂ ಗಂಗಾಧರ