ಚಿಕ್ಕೋಡಿ: ತಾಲೂಕ ಪಂಚಾಯತ್ ಇ ಓ ಎಸ್ ಎಸ್ ಕದ್ರಳಿಯವರು ಸತತವಾಗಿ ಎರಡು ವರ್ಷ ಕರ್ತವ್ಯ ನಿಭಾಯಿಸಿ ಅವರದು ಮೇಲ್ ಹುದ್ದೆಗೆ ಪದೋನ್ನತಿ ಸಂದರ್ಭದಲ್ಲಿ ಅವರನ್ನು ಗೌರವಾತ್ಮಕ ಸತ್ಕರಿಸಿ ಬೀಳ್ಕೊಡುವ ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮ ಸಂಬಂಧಪಟ್ಟ ಎಲ್ಲ ಪಂಚಾಯತಿಯ ಪಿ.ಡಿ.ಓ, ಕ್ಲಾರ್ಕ್, ಬಿಲ್ ಕಲೆಕ್ಟರ್, ಸಿಬ್ಬಂದಿ ವರ್ಗದವರ ಉಪಸ್ಥಿತಿಯಲ್ಲಿ ಬಿಳ್ಕೊಡು ಸಮಾರಂಭ ನಡೆಯಿತು.
ನೂತನವಾಗಿ ಹುದ್ದೆಗೆ ಬರುವ ಇ. ಓ. ಕೆ ಎನ್ ವನ್ನೂರ, ಅವರನ್ನು ಸ್ವಾಗತ ಸತ್ಕಾರದೊಂದಿಗೆ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಇ. ಓ. ಸರ್ ಕಾದ್ರೊಳ್ಳಿ,ಅವರ ಎರಡು ವರ್ಷ ವೃತ್ತಿಯಲ್ಲಿ ನಡೆದ ಹಲವು ಕಾರ್ಯಗಳನ್ನು ಕುರಿತು ಹಾಸ್ಯ ನುಡಿಯಲಾಯಿತು ನಂತರ ಎಲ್ಲರ ಚಪ್ಪಾಳೆ ಯೊಂದಿಗೆ ಅವರನ್ನು ಬೀಳಕೂಡಲಾಯಿತು.
ಈ ಸಮಾರಂಭ ಕುರಿತು ಎಸ್ ಎಸ್ ಕಾದ್ರೊಳ್ಳಿ ಸರ್ ಸರ್ ಅವರ ಎರಡು ವರ್ಷದ ಕಾರ್ಯ ವೃತ್ತಿಯನ್ನು ಆಲಿಸಿ ತಾಲೂಕ ಪಂಚಾಯತ್ ಏಡಿಯಾದ ಶಿವಾನಂದ ಶಿರಗಾoವಿ, ಎಸ್ ಎಸ್ ಮಠದ, ವಿ.ಡಿ. ಓ. ಭಾಕರೆ . ಹಾಗೂ ಮತ್ತಷ್ಟು ಗಣ್ಯರು ಮಾತನಾಡಿದರು.
ಈ ಕಾರ್ಯಕ್ರಮದ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಏ.ಡಿ. ಶಿವಾನಂದ ಶಿರಗಾoವಿ, ಏ. ಡಿ. ಎಸ್ ಎಸ್ ಮಠದ, ಎಂ. ಟಿ. ಜನರಾಡಾ, ರಾಜೇಂದ್ರ ವೈಗೂರ್, ರಾಜು ಚೆನ್ನವರ್, ಹಾಗೂ ತಾಲೂಕು ಪಂಚಾಯತ್ ಸರ್ವ ಸಿಬ್ಬಂದಿ ವರ್ಗದವರು ಸಂಬಂಧಪಟ್ಟ ಎಲ್ಲ ಗ್ರಾಮ ಪಂಚಾಯಿತಿ ವರ್ಗದವರು ಉಪಸ್ಥಿತಿಯಲ್ಲಿ ಈ ಬೀಳ್ಕೊಡುವ ಸಮಾರಂಭ ನಡೆಯಿತು.
ವರದಿ: ರಾಜು ಮುಂಡೆ