ಸಿಂಧನೂರು: ಸೆ 27 ಕರ್ನಾಟಕ ರಕ್ಷಣಾ ವೇದಿಕೆ “ಶಿವರಾಮೇಗೌಡ ಬಣದ” ತಾಲೂಕ ಸಮಿತಿ ಅಧ್ಯಕ್ಷ ಜಿ. ಸುರೇಶ್ ಗೊಬ್ಬರಕಲ್, ದಿನೇಶ್ ಗುಂಡೂರಾವ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣ ಪ್ರಕಾಶ್ ಪಾಟೀಲ್ ರವರು ಸಿಂಧನೂರು ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆಗೆ ಬಂದ ಸಂದರ್ಭದಲ್ಲಿ ಮನವಿ ಪತ್ರ ಸಲ್ಲಿಸಿ ಸಾರ್ವಜನಿಕ ಆಸ್ಪತ್ರೆಯ ಅವ್ಯವಸ್ಥೆಯ ಕುರಿತು ಮನವಿಯಲ್ಲಿ ತಿಳಿಸಿ ಮಾತನಾಡಿದ ಅವರು ನಗರದ ಸಾರ್ವಜನಿಕ ಆಸ್ಪತ್ರೆ ಮತ್ತು ಗ್ರಾಮೀಣ ಉಪ ಕೇಂದ್ರಗಳಲ್ಲಿ ಅಪಘಾತವಾದರೆ ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದರೆ ವೈದ್ಯರು ಇಲ್ಲ ಎಂದು ಖಾಸಗಿ ಆಸ್ಪತ್ರೆ ಹೋಗಲು ಸಿಬ್ಬಂದಿಗಳು ಹೇಳುತ್ತಾರೆ ಸರ್ಕಾರಿ 108 ವಾಹನ ವಿದ್ದರೂ ಕೂಡ ಖಾಸಗಿ ವಾಹನದಲ್ಲಿ ತೆರಳು ಹೇಳುತ್ತಾರೆ ತಾಲೂಕ ಆಸ್ಪತ್ರೆ ಮತ್ತು ಗ್ರಾಮೀಣ ಉಪ ಕೇಂದ್ರಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳ ಅವಶ್ಯಕತೆ ಇದ್ದು ಕೂಡಲೇ ವೈದ್ಯ ಮತ್ತು ಸಿಬ್ಬಂದಿಗಳನ್ನು ನೇಮಕ ಮಾಡಲು ಸೂಚಿಸಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ಸೌಲಭ್ಯ ಸ್ವಚ್ಛತೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಯನ್ನು ರೋಗಿಗಳಿಗೆ ತೊಂದರೆಯಾಗದಂತೆ ಮುಖ್ಯ ವೈದ್ಯಾಧಿಕಾರಿಗಳಿಗೆ ಸೂಚಿಸಬೇಕೆಂದು ಮತ್ತು ಆಸ್ಪತ್ರೆಯಲ್ಲಿ ಸಿಬ್ಬಂದಿಗಳ್ಯರೋ ಸಾರ್ವಜನಿಕರ್ಯರೋ ಎಂದು ತಿಳಿದಂತಾಗಿದೆ ಸಿಬ್ಬಂದಿಗಳಿಗೆ ಡ್ರೆಸ್ ಕೋಡ್ ಇಲ್ಲ ಎಂದು ತಮ್ಮ ಮನವಿಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ, ನಗರ ಘಟಕ ಅಧ್ಯಕ್ಷ ದೌಲ್ ಸಾಬ್ ದೊಡ್ಮನಿ. ತಾಲೂಕ ಗೌರವಾಧ್ಯಕ್ಷ ಜ್ಞಾನಪ್ಪ ಸುಖಪೇಟೆ. ತಾಲೂಕು ಉಪಾಧ್ಯಕ್ಷ ಹನುಮೇಶ್ ತಿಪ್ಪನಹಟ್ಟಿ. ತಾಲೂಕ ಪ್ರ. ಕಾರ್ಯದರ್ಶಿ ಬಸವರಾಜ. ತಾಲೂಕ ಸಂಚಾಲಕ ಮಹಿಬೂಬ್ ಕೆಂಗಲ್. ನಗರ ಸಂಚಾಲಕ ಶಿವು ಚೌಹಾನ್. ವಿದ್ಯಾರ್ಥಿ ಘಟಕ ಅಧ್ಯಕ್ಷ ಆಂಜಿನೇಯ. ವಿದ್ಯಾರ್ಥಿ ಘಟಕ ಅಧ್ಯಕ್ಷ ಸಂತೋಷ್. ಮಲ್ಲಿಕಾರ್ಜುನ್. ಬಂದೇನವಾಜ್ ಇನ್ನು ಅನೇಕರಿದ್ದರು.
ವರದಿ;ಬಸವರಾಜ ಬುಕ್ಕನಹಟ್ಟಿ




