Ad imageAd image
- Advertisement -  - Advertisement -  - Advertisement - 

ಒಳಮಿಸಲಾತಿಗಾಗಿ ನೂರಾರು ಮಾದಿಗರಿಂದ ತಮಟೆ ಚಳುವಳಿ

Bharath Vaibhav
ಒಳಮಿಸಲಾತಿಗಾಗಿ ನೂರಾರು ಮಾದಿಗರಿಂದ ತಮಟೆ ಚಳುವಳಿ
WhatsApp Group Join Now
Telegram Group Join Now

ಬೆಳಗಾವಿ :– ಸುಪ್ರಿಂ ಕೊರ್ಟ ನೀಡಿರುವ ತೀರ್ಪಿನಂತೆ ತಕ್ಷಣವೆ ರಾಜ್ಯ ಸರಕಾರ ರಲ್ಲಿ ಒಳಮಿಸಲಾತಿಯನ್ನು ಜಾರಿಗೊಳಿಸಬೇಕೆಂದು ಬೆಳಗಾವಿಯಲ್ಲಿ ಪ್ರೋಪೆಸರ್ ಬಿ ಕೃಷ್ಣಪ್ಪ ಬಣದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರು ಎಮ್,ಗುರುಮೂರ್ತಿ ಶಿವಮೊಗ್ಗ ನಿರ್ದೇಶನದಂತೆ ಬೆಳಗಾವಿಯಲ್ಲಿ ನೂರಾರು ಮಾದಿಗ ಸಮಾಜದವರು

ಡಾ: ಬಿ,ಆರ್,ಅಂಬೇಡ್ಕರ ಉದ್ಯಾನವನದಿಂದ ತಮಟೆ ಬಾರಿಸುತ್ತ ಪಾದಯತ್ತೆ ಮಾಡುವ ಮೂಲಕ ಚೆನ್ನಮ್ಮ ವೃತ್ತದಲ್ಲಿ ಸರಕಾರದ ವಿರುದ್ದ ಹರಿಹಾಯ್ದು ಒಳಮಿಸಲಾತಿ ನೀಡುವಲ್ಲಿ ವಿಳಂಬ ಮಾಡುತ್ತಿರುವುದು ಸರಿಯಲ್ಲ,,

30 ವರ್ಷಗಳದ ನಾವು ಸಾಮಾಜಿಕವಾಗಿ ನಮ್ಮ ಒಳಮಿಸಲಾತಿಗಾಗಿ ಹೊರಾಟ ಮಾಡುತ್ತಾ ಬಂದಿದ್ದೇವೆ ಆದರೂ ನಮಗೆ ನ್ಯಾಯ ಸಿಕ್ಕಿಲ್ಲ, ಈಗ ಸುಪ್ರಿಂ ಕೊರ್ಟ ಒಳಮಿಸಲಾತಿ ಜಾರಿಗೆ ಆದೇಶ ಮಾಡಿದರು ಹಿಂದುಳಿದ ನಾಯಕ,ದಲಿತ ನಾಯಕ ಅಂತ ಹೇಳಿಕೊಳ್ಳುವ ಈಗಿನ‌ ಮುಖ್ಯಮಂತ್ರಿಯವರು ಇದೇನಾ ನೀವು ದಲಿತರ ಪರವಾಗಿ ಇರೋದು ಎಂದು ಮಾದಿಗ ಸಮಾಜದ ಮುಖಂಡರು ಹರಿಹಾಯ್ದರು.

ಇವತ್ತು ಕೇವಲ ಜಿಲ್ಲಾ ಮಟ್ಟದಲ್ಲಿ ತಮಟೆ ಚಳುವಳಿ ಮಾಡುತಿದ್ದೇವೆ ,ನಮಗೆ ಒಳಮಿಸಲಾತಿ ಜಾರಿಗೊಳಿಸದಿದ್ದರೆ.ಮುಂದಿನ ದಿನದಲ್ಲಿ ತಮ್ಮ ಮನೆಗೆ ಮುತ್ತಿಗೆ ಹಾಕುತ್ತೇವೆಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ದಲಿತ ಮುಖಂಡರಾದ:-  ಎನ್. ಪ್ರಶಾಂತರಾವ್. ಐಹೊಳೆ ರಾಜ್ಯ ಸಂಚಾಲಕರಾದ ರಮೇಶ ಮಾದರ, ರಾಜ್ಯ ಅಲ್ಪಸಂಖ್ಯಾತರ ಘಟಕ ಅದ್ಯಕ್ಷರಾದ ರಫೀಕ ಬೋಕರೆ, ರಾಜ್ಯ ಮಹಿಳಾ ಸಂಚಾಲಕ ಕಮಲವ್ವಾ ಕರೆಮ್ಮನ್ಮವರ,ಸಲಹಾ ಸಮಿತ ಸಂಚಾಲಕ ಬಸವರಾಜ ಕಾಡಾಪುರ, ಯಮನಪ್ಪಾ ಕರಬನ್ನವರ ,ದಲಿತ ಮುಖಂಡ ಸತ್ತೆಪ್ಪಾ ಕರವಾಡೆ, ರವಿ ಕಡಕೋಳ, ಬಸವರಾಜ ಮೇಸ್ತ್ರಿ ಸೇರಿದಂತೆ ಇನ್ನೂಳಿದ ಮಾದಿಗ ಸಮಾಜದ ಮುಖಂಡರು ಮಹಿಳೆಯರು ತಮಟೆ ಚಳುವಳಿಯಲ್ಲಿ ಬಾಗಿಯಾಗಿದ್ದರು.

WhatsApp Group Join Now
Telegram Group Join Now
Share This Article
error: Content is protected !!